ದೇವನಹಳ್ಳಿ: ಮಳೆ ನೀರು ನಿಂತಿದ್ದ ರೈಲ್ವೆ ಅಂಡರ್‌ಪಾಸ್ ಮೂಲಕ ಹೊರಹೋಗಲು ಯತ್ನಿಸಿ ಕಾಲೇಜ್ ಬಸ್ ವಿದ್ಯಾರ್ಥಿಗಳ ಜೊತೆ ಸಿಲುಕಿಕೊಂಡು ಆತಂಕ ಸೃಷ್ಟಿಯಾಗಿತ್ತು. ಮಳೆ ನೀರಿಂದ ಅಂಡರ್‌ಪಾಸ್ ಜಲಾವೃತವಾಗಿತ್ತು. ಇಂತಹ ವಿಷಮ ಸ್ಥಿತಿಯಲ್ಲಿ ಕಾಲೇಜು ವಿದ್ಯಾರ್ಥಿಗಳೊಂದಿಗೆ ಬಸ್ ಅಂಡರ್ ಪಾಸ್ನಲ್ಲಿ ಸಿಲುಕಿಕೊಂಡು ಆತಂಕ ನಿರ್ಮಾಣವಾಗಿತ್ತು.
ದೇವನಹಳ್ಳಿ ತಾಲೂಕಿನ IVC ರಸ್ತೆ ಯರ್ತಿಗಾನಹಳ್ಳಿ ಬಳಿ ಇರುವ IIBS ಕಾಲೇಜಿನ 30ರಿಂದ 40ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದ ಬಸ್ ಪಾಸ್ ಆಗಲು ಸಾದ್ಯವಿರದ ಸ್ಪೇಸ್ನಲ್ಲಿ ಮುಂದೆಕ್ಕೆ ಹೋಗಲಾರದಂತೆ ಅಂಡರ್‌ಪಾಸ್ ಒಳಗೆ ಸಿಲುಕಿಕೊಂಡಿತ್ತು. ಸೊಂಟದವರೆಗೂ ನೀರು ನಿಂತಿದ್ದರು, ಕಾಲೇಜ್ ಬಸ್ನ್ನು ಪಾಸ್ ಮಾಡಿ ದುಸ್ಸಾಹಸ ಮೆರೆದಿದ್ದರು.
ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ಹೊಯ್ಸಳ ಅಪಾರ್ಟ್ಮೆಂಟ್ ಸಮೀಪದ ಅಂಡರ್ ಪಾಸ್‌ಲ್ಲಿ ಅರ್ಧಗಂಟೆ ಆತಂಕ ಸೃಷ್ಟಿಯಾಗಿತ್ತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ & ದೇವನಹಳ್ಳಿ ಅಂತರಾಷ್ಟ್ರೀಯ ಟ್ರಾಫಿಕ್ ಪೊಲೀಸರು ಕ್ರೇನ್ ಮೂಲಕ ಬಸ್‌ನ್ನ ಹಿಂದಕ್ಕೆಳೆದು ಆತಂಕ ದೂರ ಮಾಡಿದರು. ಅಬ್ಬಾ ಬದುಕಿದೆವು ಎಂಬ ಸಮಾಧಾನ ವಿದ್ಯಾರ್ಥಿಗಳದ್ದಾಗಿತ್ತು. ದುಸ್ಸಾಹಸ ಮೆರೆದ IIBS ಕಾಲೇಜ್ ಮ್ಯಾನೇಜ್‌ಮೆಂಟ್ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಿದೆ..
ಸುರೇಶ್ ಬಾಬು ಪಬ್ಲಿಕ್ ನೆಕ್ಟ್ಸ್ ದೇವನಹಳ್ಳಿ..
PublicNext
30/08/2022 08:00 pm