ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಭೇಟಿ ವೇಳೆ ರಾಜಧಾನಿ ಬೆಂಗಳೂರಿನಲ್ಲಿ ಅಭಿವೃದ್ಧಿ ಪಡಿಸಲಾಗಿದ್ದ ರಸ್ತೆಗೆ ಗುಂಡಿ ಬಿದ್ದಿದ್ದ ಪ್ರಕರಣ ಸಂಬಂಧ ಕಾಮಗಾರಿ ನಿರ್ವಹಿಸಿದ್ದ ಬಿಬಿಎಂಪಿಯ ಮೂವರು ಇಂಜಿನಿಯರ್ಗಳಿಗೆ ಬಿಬಿಎಂಪಿ ಶೋಕಾಸ್ ನೋಟಿಸ್ ಕೊಟ್ಟಿದೆ.
ಆರ್.ಆರ್.ನಗರ ಎಕ್ಸಿಕ್ಯೂಟಿವ್ ಎಂಜಿನಿಯರ್ ಎಂ.ಟಿ.ಬಾಲಾಜಿ, ಆರ್.ಆರ್.ನಗರದ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ ಹೆಚ್.ಜೆ.ರವಿ, ಆರ್.ಆರ್.ನಗರ ಅಸಿಸ್ಟೆಂಟ್ ಎಂಜಿನಿಯರ್ ಐ.ಕೆ.ವಿಶ್ವಾಸ್ಗೆ ಪಾಲಿಕೆಯಿಂದ ನೋಟಿಸ್ ನೀಡಲಾಗಿದೆ.
ಜೂನ್ 20ರಂದು ಪ್ರಧಾನಿ ನರೇಂದ್ರ ಮೋದಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಬಂದಿದ್ದರು. ಪ್ರಧಾನಿ ಮೋದಿ ಸಾಗುವ ರಸ್ತೆ ಅಭಿವೃದ್ಧಿಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸುಮಾರು 23 ಕೋಟಿ ರೂ ವೆಚ್ಚ ಮಾಡಲಾಗಿತ್ತು. ಕಾಮಗಾರಿಗಳ ಪೈಕಿ ಜ್ಞಾನಭಾರತಿಯ ಡಾ.ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಮಿಕ್ಸ್ (ಬೇಸ್) ಕ್ಯಾಂಪಸ್ ಬಳಿ 6 ಕೋಟಿ ರೂ ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಮಾಡಲಾಗಿತ್ತು. ಈ ರಸ್ತೆ ಇದೀಗ ಕುಸಿದು ಹೋಗಿದೆ. ಅದ್ದರಿಂದ ರಸ್ತೆ ಕಾಮಗಾರಿ ನಿರ್ವಹಿಸಿದ್ದ ಮೂವರು ಇಂಜಿನಿಯರ್ ಗಳಿಗೆ ಬಿಬಿಎಂಪಿಯ ರೋಡ್ ಇನ್ಫ್ರಾಸ್ಟ್ರಕ್ಚರ್ ಚೀಫ್ ಇಂಜಿನಿಯರ್ ಶೋಕಾಸ್ ನೋಟಿಸ್ ನೀಡಿದ್ದಾರೆ ಎಂದು ಪಾಲಿಕೆ ಮುಖ್ಯ ಆಯುಕ್ತ ಗಿರಿನಾಥ್ ತಿಳಿಸಿದ್ದಾರೆ.
PublicNext
24/06/2022 12:52 pm