ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮೊನ್ನೆ ಮೊನ್ನೆಯಷ್ಟೇ ಬೆಸ್ಕಾಂ ನಿರ್ಲಕ್ಷ್ಯಕ್ಕೆ ಯುವಕ ಬಲಿಯಾಗಿದ್ದಾನೆ. ಆದರೂ ಬೆಸ್ಕಾಂ ಎಚ್ಚೆತ್ತಿಲ್ಲ! ಕದ್ದು ಮುಚ್ಚಿ ಅನಧಿಕೃತವಾಗಿ ಕಾಮಗಾರಿ ನಡೆಸುವುದಲ್ಲದೆ, ಜನರ ಜೀವಕ್ಕೆ ಸಂಚಕಾರ ತರುವಂತಹ ಕೆಲಸವನ್ನೂ ಮುಂದುವರಿಸುತ್ತಿದೆ! ಈ ಬಗ್ಗೆ ʼಪಬ್ಲಿಕ್ ನೆಕ್ಸ್ಟ್ʼ ಬೆಸ್ಕಾಂ ಅಮಾನವೀಯತೆ ಬಿಚ್ಚಿಡುತ್ತಿದೆ.
ರಾಜಧಾನಿ ಬೆಂಗಳೂರಿನ ಯಾವ ರಸ್ತೆ ನೋಡಿದರೂ ಒಂದಿಲ್ಲೊಂದು ಕಾರ್ಯಕ್ಕೆ ಅಗೆದು ಬಿಟ್ಟಿರುತ್ತಾರೆ. ಜನರೂ ಹೊಂಡಾಗುಂಡಿ ದಾಟಿಯೇ ಮುಂದೆ ಸಾಗಬೇಕು. ಹೀಗೆ ಮೊನ್ನೆ ಮಧ್ಯರಾತ್ರಿ ಬೆಸ್ಕಾಂ ಅಧಿಕಾರಿಗಳು ಗಿರಿನಗರದ ಪಿಇಎಸ್ ಕಾಲೇಜು ಮುಂಭಾಗ ಅಗೆದಿದ್ದಾರೆ. ಅನಧಿಕೃತವಾಗಿ ರಸ್ತೆ ʼಬಗೆದುʼ ಡಕ್ ಮೂಲಕ ಕೇಬಲ್ ಅಳವಡಿಕೆ ನಡೆದಿದೆ.
ಇನ್ನು, ರಸ್ತೆ ಅಗೆಯುವ ಮುನ್ನ ಬಿಬಿಎಂಪಿ ಮಾರ್ಕ್ಸ್ ಆಪ್ ಮೂಲಕ ಅರ್ಜಿ ಸಲ್ಲಿಕೆ ಕಾಮಗಾರಿ ನಡೆಸುವ ಇಲಾಖೆ ಮಾಡಬೇಕು. ಬಳಿಕ ಅಗೆಯುವ ರಸ್ತೆಯಲ್ಲಿ3 ವರ್ಷದ ಒಳಗಿದ್ದರೇ ಅನುಮತಿ ನೀಡಲು ಸಾಧ್ಯವಿಲ್ಲ. ಅನುಮತಿ ಸಿಕ್ಕ ಬಳಿಕ 7 ದಿನದ ಒಳಗೆ ಕಾಮಗಾರಿ ಮುಗಿಸಬೇಕು. ಇದ್ಯಾವುದೇ ವಿಧಾನ ಬೆಸ್ಕಾಂ ಮಾಡಿಲ್ಲ. ಈ ಸಂಬಂಧ ಅಧಿಕಾರಿಗಳ ಮೇಲೆ ಎಫ್ ಐಆರ್ ದಾಖಲಿಸಲಾಗಿದೆ.
ಇದೇ ವೇಳೆ ಹನುಮಂತ ನಗರದಲ್ಲಿ ಇದೇ ರೀತಿ ಹಲವು ಕಡೆ ಕಾಮಗಾರಿ ನಡೆಯುತ್ತಿದೆ. ರಸ್ತೆ ಅಗೆದರೂ ನೆಲದಡಿ 8 ಮೀಟರ್ ಕೆಳಗೆ ಕೇಬಲ್ ಅಳವಡಿಸಬೇಕು. ವಿಪರ್ಯಾಸವೆಂದರೆ ಕೇವಲ 9 inch ನಷ್ಟು ಅಗೆದು ಕೇಬಲ್ ಹಾಕಲಾಗುತ್ತಿದೆ.
ಈ ಬಗ್ಗೆ ಬೆಸ್ಕಾಂ ಅಧಿಕಾರಿಗಳನ್ನು ಪ್ರಶ್ನಿಸಿದರೆ ಬಿಬಿಎಂಪಿ ಕಾರ್ಯವೆಂದು ಹೇಳಿ ತಪ್ಪಿಸಿಕೊಳ್ತಾರೆ. ಒಟ್ಟಿನಲ್ಲಿ ಬೆಂಗಳೂರಲ್ಲಿ ಇದೇ ರೀತಿ ಬೆಸ್ಕಾಂ ನಿಂದ 1800 ಕೋಟಿ ಮೊತ್ತದ ಕಾಮಗಾರಿ ನಡೆಯುತ್ತಿದೆ. ಈ ಕುರಿತು ಜನರಿಗೆ ಅರಿವಿಲ್ಲ. ಸ್ವಲ್ಪ ಯಾಮಾರಿದ್ರೆ ಜನರ ಜೀವ ಹಾರಿ ಹೋಗುವಂತಹ ಕಾರ್ಯ ಬೆಸ್ಕಾಂನಿಂದ ಆಗ್ತಿದೆ.
Kshetra Samachara
30/04/2022 04:28 pm