ಬೆಂಗಳೂರು: ಸುರಕ್ಷತಾ ದೃಷ್ಟಿಯಿಂದ ನೈಸ್ ರಸ್ತೆಯಲ್ಲಿ ರಾತ್ರಿ ವೇಳೆ ಟೂ ವೀಲರ್ ಗೆ ನಿರ್ಬಂಧ ಹೇರಲಾಗಿದೆ. ಸರಣಿ ಅಪಘಾತ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನ ಸವಾರರು ಸಾವನ್ನಪ್ಪುವ ಪ್ರಕರಣ ಹೆಚ್ಚಾಗುತ್ತಿದೆ.
ಅಲ್ಲದೆ, ರಾತ್ರಿ ವೇಳೆ ವೇಗವಾಗಿ ಚಾಲನೆ ಮಾಡುವ ಇತರ ವಾಹನಗಳು ಟೂ ವೀಲರ್ಸ್ ಗಳನ್ನು ಗಮನಕ್ಕೆ ತರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬೈಕ್ ಅಪಘಾತ ಹೆಚ್ಚಾಗಿತ್ತು.
ಇದೇ ಕಾರಣಕ್ಕೆ ರಾತ್ರಿ ಸಮಯ ನೈಸ್ ರಸ್ತೆಯಲ್ಲಿ ಬೈಕ್ ಗಳಿಗೆ ನೋ ಎಂಟ್ರಿ ಮಾಡಬೇಕು ಎಂದು ಸಂಚಾರಿ ಜಂಟಿ ಆಯುಕ್ತ ರವಿಕಾಂತೇಗೌಡರೂ ನೈಸ್ ಸಂಸ್ಥೆಗೆ ಸೂಚಿಸಿದ್ದರು. ಆದ್ದರಿಂದ ಜ.16ರಿಂದ ನೈಸ್ ರಸ್ತೆಯಲ್ಲಿ ರಾತ್ರಿ 10ರಿಂದ ಬೆಳಿಗ್ಗೆ 5ರ ವರೆಗ ಸಂಚಾರಕ್ಕೆ ನಿರ್ಬಂಧ ಹೇರಿ 'ನೈಸ್' ಅಧಿಕೃತ ಆದೇಶ ಹೊರಡಿಸಿದೆ.
PublicNext
13/01/2022 02:03 pm