ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮೋದಿ ಜನೌಷಧಿ ಕೇಂದ್ರಕ್ಕೆ ನುಗ್ಗಿದ ಮಳೆ ನೀರು..!

ರಿಪೋರ್ಟ್- ರಂಜಿತಾಸುನಿಲ್..

ಬೆಂಗಳೂರು: ನಗರದಲ್ಲಿ ಸುರಿಯುತ್ತಿರುವ ಮಳೆಗೆ ಎಷ್ಟೋ ಆಸ್ತಿಪಾಸ್ತಿಗಳು ನಾಶವಾಗುತ್ತಿವೆ. ಈ ಹಿನ್ನಲೆ ಯಶವಂತಪುರ ವಿಧಾನಸಭಾ ಕ್ಷೇತ್ರದ ಕಗ್ಗಲಿಪುರದಲ್ಲಿ ಬಹಳಷ್ಟು ನಷ್ಟವಾಗಿದೆ. ಮೋದಿ ಜನೌಷಧಿ ಕೇಂದ್ರಕ್ಕೆ ನೀರು ನುಗ್ಗಿದೆ. ಲಕ್ಷಾಂತ ರೂ. ಬೆಲೆ ಬಾಳುವ ಔಷಧಿಗಳು ನೀರು ಪಾಲಾಗಿ, ಔಷಧಿಗಳನ್ನ ತಿಪ್ಪೆಗೆ ಹಾಕುವ ಪರಿಸ್ಥಿತಿ ಸೃಷ್ಟಿಯಾಗಿದೆ. ಇನ್ನೂ ಕಗ್ಗಲಿಪುರದ ಸಮುದಾಯ ಆರೋಗ್ಯ ಕೇಂದ್ರವೂ ಕೂಡ ಜಲಾವೃತಗೊಂಡಿದ್ದು, ಸಾವಿರಾ ರೂ. ರುಪಾಯಿ ಬೆಲೆ ಬಾಳುವ ವಸ್ತುಗಳು ನಷ್ಟವಾಗಿದೆ.

ಇನ್ನೂ ಇದೆ ಕಗ್ಗಲಿಪುರ ವ್ಯಾಪ್ತಿಯ ಮೆಡಿಕಲ್ ಸ್ಟೋರ್ ಗಳಿಗೂ ನೀರು ತುಂಬಿದ್ದು, ಬಹಳಷ್ಟು ನಷ್ಟ ಅನುಭವಿಸಿದ್ದಾರೆ ವ್ಯಾಪರಸ್ಥರು. ಈ ಬಾರಿ ಮಳೆಯಿಂದ ಸಾರ್ವಜನಿಕ ಆಸ್ತಿಪಾಸ್ತಿ ಅಲ್ಲದೆ ಸರ್ಕಾರಕ್ಕೂ ಅಪಾರ ನಷ್ಟವಾಗಿರೋದಂತು ಸತ್ಯ.

Edited By : Somashekar
PublicNext

PublicNext

01/09/2022 11:23 pm

Cinque Terre

37.12 K

Cinque Terre

2

ಸಂಬಂಧಿತ ಸುದ್ದಿ