ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ನಲ್ಲೂರು ಕೆರೆ 35 ವರ್ಷಗಳ ನಂತರ ಭೋರ್ಗರೆದು ಹರಿಯುತ್ತಿದೆ! ಹಳೆ ನಲ್ಲೂರು ಬಳಿ ರಾಜ ಕಾಲುವೆ ಇದ್ದರೆ, ಹೊಸ ನಲ್ಲೂರು ಪ್ರಾರಂಭದವರೆಗೂ ತಗ್ಗು ಪ್ರದೇಶವಿದೆ. ಹೀಗೆ ಅರ್ಧ ಕಿ.ಮೀ. ವ್ಯಾಪ್ತಿ ಪ್ರದೇಶದಲ್ಲಿ ದಕ್ಷಿಣ ಪಿನಾಕಿನಿ ನದಿಪಾತ್ರದ ನಲ್ಲೂರು ಕೆರೆ ತುಂಬಿ ಹರಿಯುತ್ತಿದೆ.
ನಲ್ಲೂರು ಕಡೆಯಿಂದ ಹೊಸ ನಲ್ಲೂರು ಕಡೆಗೆ ಹೋಗಿ ಬರುವ ವಾಹನ ಸವಾರರು ಹರಸಾಹಸ ಪಟ್ಟು ಸಂಚರಿಸುತ್ತಿದ್ದಾರೆ. ಕೆಲವು ವಾಹನ ಕೆಟ್ಟು ನಿಂತು, ತಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ನಲ್ಲೂರು ಜನರು ಖುಷಿ ಜತೆ ಬೇಸರ ವ್ಯಕ್ತಪಡಿಸಿದ್ದಾರೆ.
20 ವರ್ಷಗಳ ಮೊದಲು ಬೆಂಗಳೂರು & ಬೆಂಗಳೂರು ಗ್ರಾಮಾಂತರ ಪ್ರದೇಶ ಈ ಮಟ್ಟಕ್ಕೆ ಬೆಳೆದಿರಲಿಲ್ಲ. ರಿಯಲ್ ಎಸ್ಟೇಟ್ ಹಾವಳಿ, ರಾಜಕಾಲುವೆ ಚರಂಡಿಗಳ ಒತ್ತುವರಿ ಇರಲಿಲ್ಲ. ಏರ್ ಪೋರ್ಟ್ ಬಂದ ವೇಳೆ ಈ ಭಾಗದ ಜಮೀನಿಗೆ ಚಿನ್ನದ ಬೆಲೆ. ರೆವಿನ್ಯೂ ಲೇಔಟ್ & ಕಮರ್ಷಿಯಲ್ ಉದ್ದೇಶಗಳಿಗಾಗಿ ನೀರು, ರಾಜಕಾಲುವೆಗಳ ಒತ್ತುವರಿಯಾಗಿದೆ.
ನೀರು ಇಳಿಜಾರು ಪ್ರದೇಶಗಳಲ್ಲಿ ಹರಿದು ಹೋಗ್ತಿದೆ. ಇದರಿಂದ ಈ ಸಲದ ಮಳೆಗೆ ಕೆರೆ- ರಾಜಕಾಲುವೆ ಪಕ್ಕದ ಜಮೀನುಗಳ ಸಾವಿರಾರು ಎಕರೆ ತೋಟದ ಬೆಳೆಗಳು ನಾಶವಾಗಿವೆ. ಕಂದಾಯ ಇಲಾಖೆ ಅಧಿಕಾರಿಗಳು ರಾಜಕಾಲುವೆ ತೆರವುಗೊಳಿಸಿದರೆ ಅನುಕೂಲ ಅಂತಾರೆ ಸ್ಥಳೀಯರು.
PublicNext
05/09/2022 09:15 pm