ಬಿಟಿಎಂ ಲೇಔಟ್: ಬೆಂಗಳೂರಿನಲ್ಲಿ ಎಡೆಬಿಡದೆ ಸುರಿದ ಮಳೆಗೆ ಎಲ್ಲ ರಸ್ತೆಗಳು ನೀರಿನಿಂದ ಆವರಿಸಿ ಭಾರಿ ಅವಸ್ಥೆ ತಂದೊಡ್ಡಿತ್ತು. ಆದ್ರೆ ಎಲ್ಲವೂದಕ್ಕಿಂತ ರೈನ್ ಬೋ ಡ್ರೈವ್ ಲೇಔಟ್ ಅಂತು ರಾಜ್ಯ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಈ ಹಿನ್ನಲೆ ರೈನ್ ಬೋ ಡ್ರೈವ್ ವಿಲ್ಲಾಗಳಲ್ಲಿ ತಹಶೀಲ್ದಾರ್ ನೋಟಿಸ್..! ನೀಡಿದ್ದಾರಂತೆ. ಕಾಲುವೆ ಜಮೀನನ್ನು ಒತ್ತುವರಿ ಮಾಡಿದ್ದು, ನೀವು ತೆರವು ಮಾಡಿ ಇಲ್ಲವೆ ನಾವು ಮಾಡ್ತೇವೆ ಎಂದು ನೋಟಿಸ್ ಕೊಡುವ ಮೂಲಕ ಎಚ್ಚರಿಕೆ ನೀಡಿದ್ದಾರೆ.
ತೆರವು ಕಾರ್ಯಾಚರಣೆಯ ವೆಚ್ಚವನ್ನ ನೀವೇ ಧರಿಸಬೇಕು ಎಂದು ನೋಟೀಸ್ ನಲ್ಲಿ ಉಲ್ಲೇಖಿಸಲಾಗಿದೆ. 15ಕ್ಕೂ ಅಧಿಕ ವಿಲ್ಲಾಗಳಿಗೆ ಬೆಂಗಳೂರು ಪೂರ್ವ ತಾಲ್ಲೂಕು ತಹಶೀಲ್ದಾರ್ ನೋಟಿಸ್ ಜಾರಿ ಮಾಡಿದ್ದಾರೆ. ಮಳೆ ನೀರು ನಿಂತು ದೇಶಾದ್ಯಂತ ಹೆಸರುವಾಸಿಯಾಗಿದ್ದ ರೈನ್ ಬೋ ಡ್ರೈವ್ ಲೇಔಟ್ ನಲ್ಲಿ ಈಗ ಒಂದು ತರಹದ ತಲ್ಲಣ ಸೃಷ್ಟಿಯಾಗಿದೆ.
ರೈನ್ ಬೋ ಡ್ರೈವ್ ಲೇಔಟ್‌ನಿಂದ ಕಾಲುವೆ ಜಮೀನು ಒತ್ತುವರಿ ಮಾಡಿರೋದು ರುಜು ಆಗಿದ್ದು, ಜಿಲ್ಲಾಡಳಿತ ನಡೆಸಿದ ಸರ್ವೆಯಲ್ಲಿ ಕಾಲುವೆ ಒತ್ತುವರಿ ಮಾಡಿ ವಿಲ್ಲಾಗಳ ನಿರ್ಮಾಣ ಮಾಡಿರೋದು ಕಂಡುಬಂದಿದೆ. ಇದೀಗ ವಿಲ್ಲಾಗಳ ತೆರವು ಮಾಡಲು ನೋಟಿಸ್..! ನೀಡಲಾಗಿದೆ. ಮಳೆ ಹಿನ್ನೆಲೆ ಸುಮ್ಮನಿದ್ದ ಅಧಿಕಾರಿಗಳು, ಈಗ ತೆರವು ಮಾಡಲೇ ಬೇಕೆಂದು ಪಟ್ಟು ಹಿಡಿಯಲಾಗಿದೆ.
ರಂಜಿತಾಸುನಿಲ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು..
PublicNext
11/09/2022 06:09 pm