ಬೆಂಗಳೂರು: ನಿನ್ನೆ ರಾತ್ರಿ 10 ಗಂಟೆಯಿಂದ ಮಧ್ಯರಾತ್ರಿ ಮೂರು ಗಂಟೆವರೆಗೂ ಸುರಿದ ಮಳೆಗೆ ಕೋರಮಂಗಲ ಮತ್ತು ಈಜಿಪುರ ನಿವಾಸಿಗಳು ರಾತ್ರಿಯಿಡೀ ಜಾಗರಣೆ ಮಾಡುವಂತಾಯಿತು. ನಿರಂತರ ಮಳೆಯ ಪರಿಣಾಮ ತುಂಬಿ ಮನೆಗಳ ಒಳಗೆ ನೀರು ನುಗ್ಗಿದೆ. ಇಡೀ ರಾತ್ರಿ ನಿವಾಸಿಗಳು ಮನೆಯಿಂದ ನೀರು ಹೊರ ಹಾಕುವ ಕಾರ್ಯದಲ್ಲಿ ನಿರತರಾಗಿದ್ದರು. ಮಳೆಯ ನೀರಿಗೆ ಮನೆಯಲ್ಲಿದ್ದ ಸೋಫಾ ಟಿವಿ ಫ್ರಿಡ್ಜ್ ಮಂಚ-ಹಾಸಿಗೆ ಜಲಾವೃತಗೊಂಡಿದ್ದವು. ಬೇಸ್ಮೆಂಟ್‌ನಲ್ಲಿ ನಿಲ್ಲಿಸಿದ್ದ ಕಾರು ಟು ವೀಲರ್‌ಗಳು ಕೂಡ ಮಳೆ ನೀರಿನಿಂದ ತುಂಬಿ ಹೋಗಿದ್ದವು.
ಇಷ್ಟೆಲ್ಲಾ ಅವಾಂತರ ಕ್ಕೆ ಕಾರಣವಾಗಿದೆ ಬಿಬಿಎಂಪಿ ಮಳೆಗಾಲದಲ್ಲಿ ರಾಜಕಾಲುವೆಯ ಕಾಮಗಾರಿ ಮಾಡುತ್ತಿದ್ದು ಇದರಿಂದ ನೀರು ಸಲೀಸಾಗಿ ಹೋಗದೆ ರಾತ್ರಿ ಸುರಿದ ಚಿಕ್ಕ ಮಳೆಗೆ ಸಂಪೂರ್ಣ ಲೇಔಟ್ ನೀರಿನಿಂದ ತುಂಬಿ ಹೋಗಿದ್ದವು. ಪ್ರತಿ ಮಳೆಗಾಲದಲ್ಲಿ ಕೂಡ ಇಲ್ಲಿನ ನಿವಾಸಿಗಳು ಮಳೆ ನೀರಿನಿಂದ ಬೇಸತ್ತು ಹೋಗಿದ್ದಾರೆ. ಅದರಲ್ಲೂ ಈ ಬಾರಿ ರಾಜಕಾಲುವೆಯ ಕೆಲಸ ಮಾಡುತ್ತಿರುವ ಕಾರಣ ಮಳೆನೀರು ಹೆಚ್ಚಾಗಬಹುದು ಎನ್ನುವ ಭೀತಿಯಲ್ಲಿ ನಿವಾಸಿಗಳು ಇದ್ದಾರೆ.
ಇಂದು ಬೆಳಗಿನಿಂದ ಏರಿಯಾದ ನಿವಾಸಿಗಳು ತಮ್ಮ ಮನೆಗಳನ್ನು ಕ್ಲೀನ್ ಮಾಡುವುದು ಮತ್ತು ನೀರಿನ ಟ್ಯಾಂಕ್‌ನಲ್ಲಿ ತುಂಬಿರುವ ಕೊಳಚೆ ನೀರನ್ನು ತೆಗೆಯುವ ಕಾರ್ಯದಲ್ಲಿ ನಿರತರಾಗಿದ್ದರು. ಬಿಬಿಎಂಪಿ ಕೂಡಲೇ ಎಚ್ಚೆತ್ತುಕೊಂಡು ಕಾಮಗಾರಿಯನ್ನ ವೇಗವಾಗಿ ಮುಗಿಸಿ ಇಲ್ಲಿನ ಜನಕ್ಕೆ ಮಳೆ ನೀರಿನಿಂದ ಮುಕ್ತಿ ನೀಡಬೇಕು.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
21/07/2022 08:08 pm