ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರದ ಮಣ್ಣಿನಲ್ಲಿ ಬೆಳೆದ ಹಲಸಿನ ಹಣ್ಣಿಗೆ ಆಂಧ್ರ ಪ್ರದೇಶದಲ್ಲಿ ಫುಲ್ ಡಿಮ್ಯಾಂಡ್ ಇದೆ. ಕೆಂಪು ಮತ್ತು ಕೇಸರಿ ತೊಳೆಯ ಹಲಸು ಗ್ರಾಹಕರ ಅಚ್ಚುಮೆಚ್ಚು, ದೊಡ್ಡಬಳ್ಳಾಪುರದ ಗೌರಿಬಿದನೂರು ರಸ್ತೆಯ ಬದಿಯಲ್ಲಿ ಮಾರಾಟಕ್ಕೆ ಇಟ್ಟಿರುವ ಹಲಸಿನ ರಾಶಿಗಳು ಗ್ರಾಹಕರನ್ನ ಸೆಳೆಯುತ್ತಿದೆ.
ಹಸಿದು ಹಲಸು ತಿನ್ನು ಉಂಡು ಮಾವಿನ ಹಣ್ಣು ತಿನ್ನು ಎಂಬ ಗಾದೆ ಮಾತಿನಂತೆ ಹಲಸಿನ ರುಚಿಗೆ ಮನಸೋಲದವರಿಲ್ಲ. ಬೇಸಿಗೆ ಆರಂಭ ಮತ್ತು ಮಳೆಗಾಲದ ಪ್ರಾರಂಭ ಹಲಸಿನ ಸುಗ್ಗಿಯ ಕಾಲ, ರಸ್ತೆಯ ಬದಿಯಲ್ಲಿ, ಹೊಲದ ನಡುವೆ, ಮನೆಯ ಹಿಂಭಾಗದ ಹಿತ್ತಲಲ್ಲಿ, ತಿಪ್ಪೆಯ ಪಕ್ಕ, ತೋಟದ ಅಂಚಿನಲ್ಲಿ ಎಲ್ಲೇ ನೋಡಿದ್ರು ಹಲಸಿನ ಮರದಲ್ಲಿ ಜೋತಾಡುವ ಹಲಸಿನ ಕಾಯಿಗಳೇ ಕಣ್ಣಿಗೆ ಬಿಳುತ್ತೆ.
ದೊಡ್ಡಬಳ್ಳಾಪುರ ತಾಲೂಕಿನ ಮಣ್ಣು ಹಲಸಿನ ರುಚಿಯನ್ನ ಮತ್ತಷ್ಟು ಹೆಚ್ಚಿಸುತ್ತೆ. ಇಲ್ಲಿನ ಮಣ್ಣು ಹಲಸಿನ ಬೆಳೆಗೆ ಸೂಕ್ತವಾಗಿದೆ ತಾಲೂಕಿನ ಬಹುತೇಕ ರೈತರು ತಮ್ಮ ಹೊಲಗಳಲ್ಲಿ ಹಲಸು ಬೆಳೆಯುತ್ತಾರೆ, ಅದರಲ್ಲೂ ತಾಲೂಕಿನ ತೂಬಗೆರೆ ಹಲಸು ಸಾಕಷ್ಟು ಪ್ರಸಿದ್ಧಿಯನ್ನ ಪಡೆದಿದೆ. ತಾಲೂಕಿನ ವಿವಿಧ ಹಳ್ಳಿಗಳಿಂದ ಹಲಸು ಸಂಗ್ರಹಿಸುವ ಮಾರಾಟಗಾರರು ನಗರದ ಅಂಬೇಡ್ಕರ್ ವೃತ್ತದ ಗೌರಿಬಿದನೂರು ರಸ್ತೆಯಲ್ಲಿ ಮಾರಾಟ ಮಾಡುತ್ತಾರೆ. ಸಗಟು ವ್ಯಾಪಾರ ಮತ್ತು ಚಿಲ್ಲರೆ ವ್ಯಾಪಾರವನ್ನು ಮಾರಾಟ ಮಾಡುತ್ತಾರೆ, ಒಂದು ಹಣ್ಣಿಗೆ 50 ರೂಪಾಯಿಂದ 200 ರೂಪಾಯಿಗೆ ಮಾರಾಟ ಮಾಡುವರು, ಒಂದು ರಾಶಿಗೆ 3 ಸಾವಿರದಿಂದ 5 ಸಾವಿರವರೆಗೂ ಮಾರಾಟ ಮಾಡುವರು.
ದೊಡ್ಡಬಳ್ಳಾಪುರದ ಹಲಸು ವಿಶೇಷವಾಗಿ ಆಂಧ್ರಪ್ರದೇಶಕ್ಕೆ ರಫ್ತು ಆಗುತ್ತದೆ, ಲೋಡ್ ಗಟ್ಟಲೆ ಹಣ್ಣು ಪ್ರತಿದಿನ ದೊಡ್ಡಬಳ್ಳಾಪುರದಿಂದ ಆಂಧ್ರಪ್ರದೇಶಕ್ಕೆ ಹೋಗುತ್ತೆ. ಹೈದರಾಬಾದ್, ಧರ್ಮವರಂ, ತಿರುಪತಿ ಯಲ್ಲಿ ಇಲ್ಲಿನ ಹಣ್ಣಿಗೆ ಸಾಕಷ್ಟು ಬೇಡಿಕೆ ಇದೆ, ಕೆಂಪು ಮತ್ತು ಕೇಸರಿ ಬಣ್ಣದ ತೊಳೆಯ ಹಣ್ಣಿಗೆ ಹೆಚ್ಚಿನ ಡಿಮ್ಯಾಂಡ್ ಇದೆ. ಬೆಂಗಳೂರಿಗೂ ಇಲ್ಲಿಂದಲೇ ಹಣ್ಣು ಸರಬರಾಜು ಆಗುತ್ತೆ.
ರಸ್ತೆ ಬದಿಯ ವ್ಯಾಪಾರ ಉತ್ತಮವಾಗಿದೆ ಆದರೆ ಹಲಸು ವ್ಯಾಪಾರಕ್ಕೆ ನಿರ್ದಿಷ್ಟವಾದ ಸ್ಥಳ ಇಲ್ಲ, ಹಲಸು ವ್ಯಾಪಾರಕ್ಕಾಗಿ ಸ್ಥಳವನ್ನ ಕೋಡಿ ಎನ್ನುವುದು ವ್ಯಾಪಾರಿಗಳ ಮನವಿಯಾಗಿದೆ, ರಾತ್ರಿ ವೇಳೆ ಹಲಸಿನ ಹಣ್ಣುಗಳು ಕಳ್ಳರ ಪಾಲಾಗುತ್ತಿವೆ ಇದಕ್ಕೆ ಕಡಿವಾಣ ಹಾಕಿ ವ್ಯಾಪಾರಿಗಳಿಗೆ ರಕ್ಷಣೆ ನೀಡ ಬೇಕಾಗಿದೆ.
Kshetra Samachara
28/05/2022 12:07 pm