ಬೆಂಗಳೂರು: ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಯಮಲೂರು ಭಾಗಶಃ ಮುಳುಗಡೆಯಾಗಿದೆ. ಹೀಗಾಗಿ ಯಮಲೂರು ಕೆರೆ ಒತ್ತುವರಿ ಮಾಡಿ ಐಶಾರಾಮಿ ಕಟ್ಟಡ ನಿರ್ಮಾಣ ಮಾಡಲಾಗಿದೆ.ಈಗ ತಡವಾಗಿ ಎಚ್ಚೆತ್ತ ಬಿಬಿಎಂಪಿ ಅಧಿಕಾರಿಗಳು ಇದಕ್ಕೆ ಸಂಬಂಧಿಸಿದಂತೆ ಮೊದಲ ಹೆಜ್ಜೆ ಇಟ್ಟಿದ್ದಾರೆ.
ಯಮಲೂರಿನ ದಿವ್ಯ ಶ್ರೀ ಟೆಕ್ ಪಾರ್ಕ್ ನೆಲಸಮ ಮಾಡುವ ಪ್ಲಾನ್ ನಡೆಯುತ್ತಿದೆ. ದಿವ್ಯ ಶ್ರೀ ಟೆಕ್ ಪಾರ್ಕ್‌ಅನ್ನು ನೆಲಸಮ ಮಾಡಲು ಅಧಿಕಾರಿಗಳು ಈಗಾಗಲೇ ಮುಂದಾಗಿದ್ದಾರೆ. ಯಮಲೂರು ಕೆರೆ ಒತ್ತುವರಿ ಮಾಡಿ ಐಷಾರಮಿ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಇನ್ನು ಮಳೆ ನೀರಿನಲ್ಲಿ ಕಾರು ಬೈಕು ತೇಲ್ತಾ ಇದೆ. ರಣಚಂಡಿ ಮಳೆಗೆ ಹಳೆ ಏರ್ಪೋರ್ಟ್ ರಸ್ತೆ ತತ್ತರಿಸಿ ಹೋಗಿದೆ. ಭಾಗಶಃ ಮುಳುಗಡೆಯಾದ್ರು ಅಧಿಕಾರಿಗಳು ಮಾತ್ರ ಇತ್ತ ಗಮನ ಹರಿಸ್ತಾ ಇಲ್ಲ. ಹೀಗಾಗಿ ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ. ಜೊತೆಗೆ ಜನರನ್ನ ಒಂದು ಕಡೆಯಿಂದ ಮತ್ತೊಂದು ಕಡೆಗೆ ಟ್ಯಾಕ್ಟರ್‌ನಲ್ಲಿ ರವಾನಿಸ್ತಾ ಇದ್ದಾರೆ.
PublicNext
06/09/2022 04:03 pm