ಬೆಂಗಳೂರು: ರಾಜಧಾನಿ ಬೆಂಗಳೂರಿನ ಸ್ವತ್ತಿನ ಮಾಲೀಕರು ಇನ್ನು ಮುಂದೆ ತಪ್ಪು ತಪ್ಪಾಗಿ ವಲಯವಾರು ವರ್ಗೀಕರಣ ನಮೂದಿಸಿ ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯಡಿ ವಾಸ್ತವಕ್ಕಿಂತ ಕಡಿಮೆ ಆಸ್ತಿ ತೆರಿಗೆ ಕಟ್ಟೋಕೆ ಆಗಲ್ಲ.
ಯಾಕೆಂದರೆ ಇನ್ನು ಮುಂದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಯ ಕಂದಾಯ ಇಲಾಖೆಯು ಯಾವುದೋ ವಲಯ ದಾಖಲಿಸಲು ಇನ್ನಾವುದೋ ವಲಯ ವರ್ಗೀಕರಣವನ್ನು ದಾಖಲಿಸಿ ಆಸ್ತಿ ತೆರಿಗೆ ಘೋಷಣೆ ಮಾಡುತ್ತಿದ್ದ ದುರುಪಯೋಗ ಪ್ರಕರಣ ನಿಯಂ ತ್ರಿಸುವ ಹಿನ್ನೆಲೆಯಲ್ಲಿ ಆಸ್ತಿ ಮಾಲೀಕರು ಆಸ್ತಿ ತೆರಿಗೆಯನ್ನು ಆನ್ ಲೈನ್ ಮೂಲಕ ಕಟ್ಟುವ ಸಂದರ್ಭದಲ್ಲಿ ಸ್ವತ್ತಿನ ಮಾಹಿತಿ ಹಾಗೂ ಆ ಅಸ್ತಿ ಇರುವ ಬೀದಿ ಪ್ರದೇಶ ಅಥವಾ ರಸ್ತೆಗಳನ್ನು ಆಯ್ಕೆ ಮಾಡುತ್ತಿದ್ದಂತೆ ಪಾಲಿಕೆಯ ಆಸ್ತಿ ತೆರಿಗೆಯ ಸಾಪ್ಟವೇರ್ ನಲ್ಲಿ ಪೂರ್ವ ನಿಗದಿ ಮಾಡಿರುವ ವರ್ಗಿಕರಣ ಮಾಡಲಾದ ವಲಯಗಳು ತನ್ನಿಂದ ತಾನೆ ಆಯ್ಕೆಯಾಗುವಂತೆ ಬದಲಾವಣೆ ಮಾಡಿದೆ.
*ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ, ನಗರದ ಬೀದಿಗಳು/ಪ್ರದೇಶಗಳು/ರಸ್ತೆಗಳನ್ನು ಆಯ್ಕೆ ಮಾಡಿದ ನಂತರ ಸದರಿ ಬೀದಿ/ಪ್ರದೇಶ/ರಸ್ತೆಯ ವಲಯ ವರ್ಗೀಕರಣವು ತಂತ್ರಾಂಶದಲ್ಲಿ ತನ್ನಿಂತಾನೆ ಆಯ್ಕೆ ಆಗುವಂತೆ ನಿರ್ಧರಿಸಲಾಗಿದೆ.
ಈ ರೀತಿ ಮಾಡಿದ್ದಲ್ಲಿ ವಲಯ ವರ್ಗೀಕರಣದ ಆಯ್ಕೆಯಲ್ಲಿ ಯಾವುದೇ ದುರುಪಯೋಗ ಮಾಡಲು ಅವಕಾಶವಿಲ್ಲದಂತಾಗುತ್ತದೆ. ಹಾಗೂ ಪಾಲಿಕೆಯ ಆದಾಯದಲ್ಲಿ ಸೋರಿಕೆ ಆಗುವುದಿಲ್ಲ.
Kshetra Samachara
21/04/2022 10:44 pm