ಬೆಂಗಳೂರು ಬಳ್ಳಾರಿ ನ್ಯಾಷನಲ್ ಹೈವೆಯ ದೇವನಹಳ್ಳಿ ಏರ್ಪೋರ್ಟ್ ರಸ್ತೆ ನಿರ್ವಹಣೆ ಜವಾಬ್ದಾರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ್ದು. ಬೆಂಗಳೂರು ಜನ ಸಿಗ್ನಲ್ ಫ್ರೀಯಾಗಿ 30 ನಿಮಿಷದಲ್ಲೇ ಏರ್ಪೋರ್ಟ್ ತಲುಪಲು 29 ಕಿ.ಮೀ.ವರೆಗೂ ಹೆದ್ದಾರಿಗೆ ಗ್ರಿಲ್ಸ್ ಅಳವಡಿಸಿದೆ.
ಆದ್ರೆ, ಸರ್ವೀಸ್ ರಸ್ತೆಯಿಂದ ಹೈವೆಗೆ ಸಂಪರ್ಕ ಪಡೆಯಬೇಕೆಂದ್ರೆ NHAI ವ್ಯವಸ್ಥೆ ಮಾಡಿದ ಸ್ಥಳದಲ್ಲೇ ಪಡೆಯಬೇಕು. ಆದರೆ, ಖಾಸಗಿ ಹೋಟೆಲ್, ಅಂಗಡಿಗಳು, ಕಲ್ಯಾಣ ಮಂಟಪದವ್ರು ತಮಗಿಷ್ಟ ಬಂದ ಕಡೆ, ವ್ಯಾಪಾರಕ್ಕೆ ಅನುಕೂಲ ಆಗಲಿ ಅಂತ ಗ್ರಿಲ್ಲ್ ನ ಕಟ್ ಮಾಡಿರುವ ಸ್ಥಳಗಳು ಇದೀಗ ಯಮಸ್ವರೂಪಿ ಆಗುತ್ತಿವೆ. ಮೊನ್ನೆ ರಾತ್ರಿ ಮಾಗಡಿ ಮೂಲದ ಮೋಹನ್ ರಾವ್ (48) ಗ್ರಿಲ್ಸ್ ದಾಟಲು ಹೋಗಿ ಬಸ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಾರಕ್ಕೊಂದು ಅಪಘಾತ ಈ ಭಾಗದಲ್ಲಿ ನಡೆದು ಜನ ಸಾಯುತ್ತಲೇ ಇದ್ದಾರೆ!
ಬೆಂಗಳೂರಿನ ಹೆಬ್ಬಾಳದಿಂದ ದೇವನಹಳ್ಳಿ ಏರ್ಪೋರ್ಟ್ ವರೆಗೂ 29 ಕಿ.ಮೀ. ಸಿಗ್ನಲ್ ಫ್ರೀ ಕಾರಿಡಾರ್ ಮೂಲಕ ಸಂಚರಿಸುವ ವ್ಯವಸ್ಥೆ ಇದೆ. ಆದರೆ, ದೇವನಹಳ್ಳಿ, ಚಿಕ್ಕಸಣ್ಣೆ, ಕಲ್ಯಾಣ ಮಂಟಪ, ಪೆಟ್ರೋಲ್ ಬಂಕ್, ಕನ್ನಮಂಗಲ ಗೇಟ್ ಗಳ ಬಳಿ ಸರ್ವೀಸ್ ರಸ್ತೆ ಕ್ಲೋಸ್ ಮಾಡಲು ಹಾಕಿದ್ದ ಗ್ರಿಲ್ಸ್ ಕಟ್ಟಿಂಗ್ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ದೇವನಹಳ್ಳಿ ಟ್ರಾಫಿಕ್ ಪೊಲೀಸರು ತಿಳಿಸಿದ್ದರೂ ತಪ್ಪಿತಸ್ಥರ ಮೇಲೆ NHAI ಕ್ರಮ ಜರುಗಿಸುತ್ತಿಲ್ಲ. ಭ್ರಷ್ಟ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಇನ್ನೆಷ್ಟು ಅಮಾಯಕರು ಬಲಿಯಾಗಬೇಕು?
ಹೆಬ್ಬಾಳದಿಂದ ದೇವನಹಳ್ಳಿ ವರೆಗೂ ಯಲಹಂಕ ಕಾಫಿ ಡೇ, ಏರ್ಪೋರ್ಸ್, ಹುಣಸಮಾರನಹಳ್ಳಿ, ಚಿಕ್ಕಜಾಲ & ಸಾದಳ್ಳಿ ಗೇಟ್ ಬಳಿ ಮಾತ್ರ ಸರ್ವೀಸ್ ರಸ್ತೆಯಿಂದ ಹೈವೇಗೆ ಸಂಪರ್ಕವಿದೆ. ಆದರೆ, ಏರ್ಪೋರ್ಟ್ ವರೆಗೆ ಮಾತ್ರ ಗಮನ ಹರಿಸೋ NHAI ದೇವನಹಳ್ಳಿ ಮಾರ್ಗವಾಗಿ ಗಮನ ಹರಿಸುತ್ತಿಲ್ಲ. ಸೂಕ್ತ ಸ್ಥಳ ಬಳಸದೆ ಎಲ್ಲೆಂದರಲ್ಲಿ ಹೈ ವೇ ದಾಟುವಾಗ ಅತಿವೇಗವಾಗಿ ಬರೋ ವಾಹನಕ್ಕೆ ಸಿಕ್ಕಿ ಜನ ಸಾಯ್ತಿದ್ದಾರೆ. ಈ ದುರಂತ ಸಾವುಗಳು ಇನ್ನೆಷ್ಟು ದಿನ !?
PublicNext
10/09/2022 01:07 pm