ಬೆಂಗಳೂರು : ಪೊಲೀಸರೆಂದರೆ ನಮಗೆ ಮೊದಲು ತಲೆಯಲ್ಲಿ ಬರುವುದೇ ಸಮಾಜದಲ್ಲಿರುವ ಕಳ್ಳರನ್ನು ಹಿಡಿಯುವುದು ಮತ್ತು ಪ್ರಕರಣ ಗಳನ್ನು ಭೇದಿಸುವುದಷ್ಟೇ ಅವರ ಕೆಲಸ ಅಂದುಕೊಳ್ಳುತ್ತೇವೆ.
ಆದರೆ ಇಲ್ಲೊಂದು ಪೊಲೀಸ್ ಠಾಣೆಯಲ್ಲಿ SSLC ಮಕ್ಕಳಿಗೆ ಪಾಠ ಕೂಡ ಮಾಡ್ತಾರೆ. ಹೌದು ಬೆಂಗಳೂರಿನ ಇದೊಂದು ಪೊಲೀಸ್ ಸ್ಟೇಷನ್ ನಲ್ಲಿ SSLC ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ.
May 19,2022 ಈ ದಿನವನ್ನು SSLC ಮಕ್ಕಳು ಯಾವತ್ತು ಮರೆಯೋಕ್ಕಾಗಲ್ಲ ಯಾಕೆಂದರೆ ಇದೇ ದಿನವೊಂದು sslc ಭವಿಷ್ಯ ನಿರ್ಧಾರವಾಗಿತ್ತು. SSLC ಪರೀಕ್ಷೆಯಲ್ಲಿ ಎಷ್ಟು ವಿದ್ಯಾರ್ಥಿಗಳು ಪಾಸಾದರೆ ಇನ್ ಅದೆಷ್ಟೋ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಫೇಲ್ ಆಗಿದ್ದರು.ಪರೀಕ್ಷೆಯಲ್ಲಿ ಫೇಲಾದ ಮಕ್ಕಳಿಗೆ ಈ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆದ ರಾಜೇಶ್ ಅವರು ಪರೀಕ್ಷೆಯಲ್ಲಿ ಫೇಲಾದ ಮಕ್ಕಳನ್ನು ಒಟ್ಟುಗೂಡಿ ಮಕ್ಕಳಿಗೆ ಮರು ಪರೀಕ್ಷೆಗೆ ಸಿದ್ಧತೆ ಮಾಡಿ ಕೊಡ್ತಾಯಿದ್ದಾರೆ.
ಹೌದು ಈ ಅಪರೂಪದ ದೃಶ್ಯ ಕಂಡು ಬಂದಿದ್ದು ಬಂಡೆಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ.ಬಂಡೆಪಾಳ್ಯ ಪೊಲೀಸ್ ಇನ್ಸ್ಪೆಕ್ಟರ್ ಆದ ಎಲ್ ವೈ ರಾಜೇಶ್ ಪಬ್ಲಿಕ್ ಎಕ್ಸಾಮ್ SSLC ಪರೀಕ್ಷೆಯಲ್ಲಿ ಫೇಲಾದ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯೂಷನ್ ನೀಡಲಾಗುತ್ತಿದೆ.
ವಿದ್ಯಾರ್ಥಿಗಳಿಗೆ ಟೀಚರ್ ಇಟ್ಟು ಪ್ರತಿದಿನ ವಿದ್ಯಾರ್ಥಿಗಳಿಗೆ ಟುಶನ್ ನೀಡಲಾಗುತ್ತಿದೆ ಮತ್ತು ಮರು ಪರೀಕ್ಷೆ ಬರೆಯಲು ವಿದ್ಯಾರ್ಥಿಗಳನ್ನು ಸಿದ್ಧ ಮಾಡಲಾಗುತ್ತಿದೆ.ವಿದ್ಯಾರ್ಥಿಗಳು ಕೂಡ ಖುಷಿಯಾಗಿಯೇ ಬಂದು ಪೊಲೀಸರು ಉಚಿತವಾಗಿ ಕೊಡುತ್ತಿರುವ ಟ್ಯೂಷನ್ ನಾ ಉಪಯೋಗ ಮಾಡಿಕೊಳ್ಳುತ್ತಿದ್ದಾರೆ.
ಪೊಲೀಸರು ಮಾಡುತ್ತಿರುವ ಈ ಒಳ್ಳೆಯ ಕಾರ್ಯದಿಂದ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಸಾಗಲಿ ಎಂದು ಆಶಿಸೋಣ.ಈ ಒಳ್ಳೆಯ ಕೆಲಸ ಮಾಡುತ್ತಿರುವ ಎಲ್ ವೈ ರಾಜೇಶ್ ಮತ್ತು ಬಂಡೆಪಾಳ್ಯ ಪೊಲೀಸ್ ಸಿಬ್ಬಂದಿಗೆ ನಮ್ಮದೊಂದು ಸಲಾಂ.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
14/06/2022 09:12 am