ದೇವನಹಳ್ಳಿ: ಕೆಯುಎಡಿಬಿ (KUADB) ಭೂಸ್ವಾಧೀನ ವಿರೋಧಿಸಿ ವಿವಿಧ ಸಂಘಟನೆ ಇಂದು ದೇವನಹಳ್ಳಿ ಬಂದ್ಗೆ ಕರೆ ನೀಡಿವೆ. ಈ ಹಿನ್ನೆಲೆಯಲ್ಲಿ ನೂರಾರು ಜನ ರೈತರು, ಹೋರಾಟಗಾರರು ರಸ್ತೆಗಿಳಿದು ಮೆರವಣಿಗೆ ನಡೆಸಲು ಮುಂದಾದರು. ತಕ್ಷಣ ಈಶಾನ್ಯ ವಿಭಾಗದ ದೇವನಹಳ್ಳಿ ಪೊಲೀಸರು, ಪ್ರತಿಭಟನಾಕಾರರು ರಸ್ತೆಗೆ ಇಳಿಯದಂತೆ ತಡೆದಿದ್ದಾರೆ. ಆಗ ಪೊಲೀಸರು & ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ, ನೂಕಾಟ, ತಳ್ಳಾಟ, ಸರ್ಕಾರ & ಪೊಲೀಸರ ವಿರುದ್ಧ ಘೋಷಣೆ ಮೊಳಗಿದವು..
ದೇವನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದ ಬಳಿ ನಡೆಯುತ್ತಿರುವ ರೈತಪರ ಪ್ರತಿಭಟನೆ... ಇನ್ನು ರಸ್ತೆಗಿಳಿದರೆ ಬಂಧಿಸುವ ಎಚ್ಚರಿಕೆ ನೀಡಿದ ಪೊಲೀಸರು... ಈ ಬೆಳವಣಿಗೆಗಳ ನಡುವೆ ರೈತರ ಹೋರಾಟಕ್ಕೆ ಕನ್ನಡಪರ ಸಂಘಟನೆಗಳು ಮತ್ತು JDS ಪಕ್ಷದ ಕಾರ್ಯಕರ್ತರು ಬೆಂಬಲ ನೀಡಿ ಪ್ರತಿಭಟನೆಯಲ್ಲಿ ಭಾಗಿಯಾದರು. ಪ್ರತಿಭಟನೆಗೆ ಕೈಜೋಡಿಸಿ ಸರ್ಕಾರದ ವಿರುದ್ಧ ಹೋರಾಟಗಾರರು ಘೋಷಣೆ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು..
ದೇವನಹಳ್ಳಿಯಲ್ಲಿ ಬೆಳಗ್ಗೆ 11ರ ವರೆಗೆ ಪ್ರತಿಭಟನೆಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಇನ್ನು ಕಾಂಗ್ರೆಸ್ ಪಕ್ಷವೂ ಸಹ ರೈತರ ಹೊರಾಟಕ್ಕೆ ಬೆಂಬಲ ನೀಡಿ ಪ್ರತಿಭಟನೆ ಯಲ್ಲಿ ಭಾಗಿಯಾಗಲಿದೆ.
ಸುರೇಶ್ ಬಾಬು, ಪಬ್ಲಿಕ್ ನೆಕ್ಸ್ಟ್, ದೇವನಹಳ್ಳಿ
PublicNext
17/06/2022 11:52 am