ಬೆಂಗಳೂರು: 26 ಗಂಟೆ.. ಹದಿನೈದು ಸಾವಿರ ಕಿಲೋಮೀಟರ್ ಗಳ ಪ್ರಯಾಣ... ಭೂಮಿಯಿಂದ 36 ಸಾವಿರ ಅಡಿಗಳ ಮೇಲೆ ಒಂದು ಜೀವ ಉಳಿಸಲು ವೈದ್ಯರ ಪರದಾಟ... ಹೌದು 62 ವರ್ಷದ ಮಹಿಳೆಯ ಜೀವ ಉಳಿಸಲು ಯುಎಸ್ ನಿಂದ ಭಾರತಕ್ಕೆ ಏರ್ ಲಿಫ್ಟ್ ಮಾಡಲಾಯಿತು. ಬೆಂಗಳೂರಿನ ಇಂದಿರಾ ನಗರದ ನಿವಾಸಿ ಒಬ್ಬರು ಯುಎಸ್ ಗೆ ತಮ್ಮ ಮಕ್ಕಳನ್ನು ನೋಡಲು ಹೋಗಿದ್ರು. ಆದರೆ ಅವರಿಗೆ ಯುಎಸ್ ನಲ್ಲಿ ಕೊಂಚ ಅನಾರೋಗ್ಯ ಕಾಣಿಸಿಕೊಂಡಿದೆ. ಅನಾರೋಗ್ಯ ಹಿನ್ನೆಲೆಯಲ್ಲಿ ಮಹಿಳೆ ಅಲ್ಲೇ ಒಂದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ರು..
ಆದರೆ ಅವರ ಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗಿದ್ದು ಮತ್ತು ಆಸ್ಪತ್ರೆಯ ಖರ್ಚು ದುಬಾರಿ ಆಗುತ್ತಿತ್ತು. ಅಲ್ಲದೇ ಇವರಿಗೆ ಹೃದಯ ಸಂಬಂಧಿ ಖಾಯಿಲೆಗಳು ಕೂಡ ಹೆಚ್ಚಾಗಿದ್ದವು. ಭಾರತದಲ್ಲೇ ಮಹಿಳೆಗೆ ಚಿಕಿತ್ಸೆ ಕೊಡಿಸಲು ಕುಟುಂಬವು ನಿರ್ಧಾರ ಮಾಡಿ ಯುಎಸ್ ನಿಂದ ಭಾರತಕ್ಕೆ ಏರ್ ಲಿಫ್ಟ್ ಮಾಡಲಾಯಿತು.
ಯುಎಸ್ ನ ಪೋರ್ಟ್ಲ್ಯಾಂಡ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ಇಳಿದಿದ್ದಾರೆ. ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಹಿಳೆಯನ್ನು ಆಂಬುಲೆನ್ಸ್ ನಲ್ಲಿ ಜೀರೋ ಟ್ರಾಫಿಕ್ ಮೂಲಕ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.
-ನವೀನ್, ಪಬ್ಲಿಕ್ ನೆಕ್ಸ್ಟ್, ಬೆಂಗಳೂರು.
Kshetra Samachara
20/07/2022 09:44 pm