ಬೆಂಗಳೂರು: ಪ್ರಸಕ್ತ ದಿನಗಳಲ್ಲಿ ಆಸ್ಪತ್ರೆ ಮೆಡಿಕಲ್ ಕಾಲೇಜುಗಳನ್ನು ಮುನ್ನಡೆಸುವುದು ಕಷ್ಟದ ಕೆಲಸ. ಗ್ರಾಮಾಂತರ ಭಾಗದಲ್ಲಿ ತನ್ನದೇ ಆದ ಸೇವೆ ಮೂಲಕ ಉತ್ತಮ ರೀತಿಯಲ್ಲಿ ಎಂವಿಜೆ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸೇವೆ ನೀಡುತ್ತಿದೆ. ಕೊರೊನಾ ವೇಳೆ ಎಂವಿಜೆ ಆಸ್ಪತ್ರೆ ಸಾವಿರಾರು ಜನರಿಗೆ ಉಚಿತವಾಗಿ ಜನಸಾಮಾನ್ಯರ ಜೀವ ಉಳಿಸಿದೆ. ಗ್ರಾಮಾಂತರ ಭಾಗದಲ್ಲಿ ಇಂತಹ ಆಸ್ಪತ್ರೆಗಳ ಸೇವೆ ಜನರಿಗೆ ಅತ್ಯವಶ್ಯಕ.
ನೂತನವಾಗಿ ಸ್ಕಿಲ್ ಮತ್ತು ಸಿಮ್ಯುಲೇಶನ್ ಮೂಲಕ ಪ್ರಯೋಗ ನಡೆಸಿ ವೈದ್ಯ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಕಾರ್ಯ ಪ್ರಾರಂಭಿಸಿರುವುದು ಉತ್ತಮ ಸಾಧನೆಯಾಗಿದೆ. ನೂತನವಾಗಿ ವೈದ್ಯರಾದ ವಿದ್ಯಾರ್ಥಿಗಳು ರೋಗಿಗಳಿಗೆ ಉತ್ತಮ ರೀತಿ ಚಿಕಿತ್ಸೆ ನೀಡಬೇಕಿದೆ.ವೈದ್ಯರು ದೇವರ ಸಮಾನ. ರೋಗಿಗಳಿಗೆ ಮನವರಿಕೆ ಆಗುವ ರೀತಿ ಸ್ಪಂದಿಸಬೇಕಿದೆ.
ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಎಂವಿಜೆ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸ್ಕಿಲ್ ಅಂಡ್ ಸಿಮ್ಯುಲೇಶನ್ ಘಟಕ ಉದ್ಘಾಟಿಸಿ ಮಾತನಾಡಿದರು.
Kshetra Samachara
06/05/2022 10:23 am