ಬೆಂಗಳೂರು: ಕೊರೊನಾ ಯಾವಾಗ ವಕ್ಕರಿಸಿತೋ ಅಂದಿನಿಂದ BMTC ಎಸಿ ಬಸ್‌ಗಳು ಮೂಲೆಗುಂಪಾದವು. ಆದರೆ ಸದ್ಯ ಕೊರೊನಾ ಕಡಿಮೆಯಾಗಿ ಜನ ಜೀವನ ಸಹಜ ಸ್ಥಿತಿಗೆ ಬಂದು ನಿಂತಿದೆ. ಆದರೂ ನಿಗಮ ಕೋಟಿ ಕೋಟಿ ಖರ್ಚು ಮಾಡಿ ಎಸಿ ಬಸ್‌ಗಳ ನಿರ್ವಹಣೆ ಮಾಡುತ್ತಿದೆ. ಇದು ನಿಗಮದ ಬೊಕ್ಕಸಕ್ಕೆ ಹೊರೆಯಾಗುತ್ತಿದೆ.
ಕೊರೊನಾ ಈಗ ತಣ್ಣಗಾಗಿದ್ದು, ಎಲ್ಲವೂ ಸಹಜ ಸ್ಥಿತಿಗೆ ಮರಳಿದೆ. ಆದರೆ BMTC ವರಸೆ ಮಾತ್ರ ಬೇರೆಯೇ ಇದೆ. ಕೊರೊನಾ ಮುಗಿದರೂ BMTC ನಿಗಮಕ್ಕೆ ವಜ್ರ ಎಸಿ ಬಸ್‌ಗಳನ್ನು ಪೂರ್ಣಪ್ರಮಾಣದಲ್ಲಿ ರಸ್ತೆಗೆ ಇಳಿಸಲು ಸಾಧ್ಯವಾಗುತ್ತಿಲ್ಲ. ಕೋಟಿ ಕೋಟಿ ರೂಪಾಯಿ ಬಂಡವಾಳ ಹೂಡಿ ತಂದ ಬಿಎಂಟಿಸಿ ಎಸಿ ಬಸ್‌ಗಳನ್ನು ಈಗ ಯಾರೂ ಕೇಳೋರಿಲ್ಲ ಎಂಬಂತಾಗಿದೆ. ಕಳೆದ ಎರಡೂವರೆ ವರ್ಷದಿಂದ 500ಕ್ಕೂ ಹೆಚ್ಚಿನ ವಾಯು ವಜ್ರ ಎಸಿ ಬಸ್ ಗಳು ನಿಂತಲ್ಲೇ ನಿಂತಿವೆ. ಬಿಎಂಟಿಸಿ ಬಳಿ ಒಟ್ಟು 780 ಎಸಿ ಬಸ್‌ಗಳಿವೆ. ಇದರಲ್ಲಿ ಸದ್ಯ ಆಪರೇಟ್ ಆಗ್ತಿರೋದು ಮಾತ್ರ 180 ಬಸ್‌ಗಳು ಮಾತ್ರ. ಉಳಿದ 580 ಎಸಿ ಬಸ್‌ಗಳು ನಿಗಮದ ಡಿಪೋದಲ್ಲೇ ತುಕ್ಕು ಹಿಡಿಯುತ್ತ ಬಿದ್ದಿವೆ. ಈ ಬಗ್ಗೆ ಮಾತನಾಡಿರುವ ನೌಕರರ ಸಂಘದ ಮುಖಂಡ ಆನಂದ್, BMTC ನಿಗಮದ ವಿರುದ್ಧ ಹರಿಹಾಯ್ದಿದ್ದಾರೆ.
PublicNext
04/09/2022 07:09 pm