ವರದಿ - ಗಣೇಶ್ ಹೆಗಡೆ
ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸ್ಥಾಪನೆಯಾಗಿ ಇದೇ ತಿಂಗಳ ಆಗಷ್ಟ್ 15 ರಂದು ಸ್ಥಾಪನೆಯಾಗಿ 25 ವರ್ಷ ಪೂರೈಸುತ್ತದೆ. ಈ ಸಂಬಂಧ ರಾಜಧಾನಿಗರಿಗೆ ಭರ್ಜರಿ ಗಿಫ್ಟ್ ಘೋಷಣೆ ಮಾಡಿದೆ.
ಸ್ವಾತಂತ್ರ್ಯೋತ್ಸವದಂದು ನಗರದಲ್ಲಿ ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಉಚಿತ ಪ್ರಯಾಣವನ್ನು ಪ್ರಕಟಿಸಲಾಗಿದೆ. ಅಂದು ಒಂದು ದಿನ ಪೂರ್ತಿ ಯಾರೇ ಎಲ್ಲಿಗೆ ಬೇಕಾದ್ರೂ ಬಿಎಂಟಿಸಿ ಬಸ್ ನಲ್ಲಿ ಪ್ರಯಾಣ ಮಾಡಹಬಹುದು ಎಂದು ಬಿಎಂಟಿಸಿ ಸಂಸ್ಥೆ ಅಧ್ಯಕ್ಷ ನಂದೀಶ್ ರೆಡ್ಡಿ ತಿಳಿಸಿದರು.
ಬಿಎಂಟಿಸಿ ಕೇಂದ್ರ ಕಚೇರಿ ಶಾಂತಿ ನಗರದಲ್ಲಿ ನಡೆದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಪ್ರತಿ ನಿತ್ಯ 3.15 ಕೋಟಿ ವಹಿವಾಟು ನಡೆಯಲಿದೆ. ಆದರೆ ಆಗಷ್ಟ್ 15 ರಂದು ಪ್ರಯಾಣಿಕರಿಗೆ ವಿನಾಯತಿ ನೀಡಲಾಗಿದೆ.
ಉಚಿತವಾಗಿ ಬಸ್ ನಲ್ಲಿ ಆ ದಿನ ಪ್ರಯಾಣಿಸಬಹುದು. ಅದರ ಖರ್ಚನ್ನು ರಾಜ್ಯ ಸರ್ಕಾರ ನೀಡ ಲಿದೆ ಎಂದರು.
PublicNext
11/08/2022 01:21 pm