ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಚಿಕ್ಕ ಬೇಗೂರು ಕೆರೆ ಅಂಗಳದಲ್ಲಿ ಅಕ್ರಮವಾಗಿ ಕಟ್ಟಿಕೊಂಡಿದ್ದ ಮನೆಗಳು ಮತ್ತು ಅಂಗನವಾಡಿ ಜಾಗವನ್ನು ತೆರೆವು ಕಾರ್ಯಾಚರಣೆ ಮಾಡಲಾಯಿತು.
ಬೊಮ್ಮನಹಳ್ಳಿ ಬಿಬಿಎಂಪಿ ಅಧಿಕಾರಿಗಳು ಮತ್ತು ಕೆರೆ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕಂದಾಯ ಅಧಿಕಾರಿಗಳ ಸಹಭಾಗಿತ್ವದಲ್ಲಿ ಈ ತೆರವು ಕಾರ್ಯಚರಣೆ ಮಾಡಲಾಯಿತು.
ಈ ವೇಳೆ ಮನೆ ಮಾಲೀಕರು ಹಾಗೂ ಬಿಬಿಎಂಪಿ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಇನ್ನು ಮಳೆಯ ನಡುವೆಯೂ ಒತ್ತುವರಿ ತೆರವು ಮಾಡಿದ್ದು ಅಂಗನವಾಡಿ ಕಟ್ಟಡದಲ್ಲಿದ್ದ ಮೊಟ್ಟೆ,ದಿನಸಿ ಹಾಗೂ ಪಾತ್ರೆಗಳನ್ನ ಹೊರಗೆ ಇಟ್ಟಿರುವ ದೃಶ್ಯ ಗಳು ಕಂಡು ಸಾಮಾನ್ಯವಾಗಿತ್ತು.
Kshetra Samachara
04/08/2022 01:19 pm