ಬೆಂಗಳೂರು : ಬೆಂಗಳೂರಿನ ರಸ್ತೆಗಳನ್ನು ಖಾಸಗಿ ಮೊಬೈಲ್ ಟವರ್ ಕಂಪನಿಗಳು ಹೇಗೆ ಬೇಕೋ ಹಾಗೆ ರಸ್ತೆಗಳನ್ನು ಅಗೆದು ಬಿಟ್ಟು ಬಿಡುತ್ತಾರೆ ಇದರಿಂದ ಬೇಸತ್ತು ಹೋಗಿದ್ದ ಸ್ಥಳೀಯರು ಇಂದು ಖುದ್ದಾಗಿ ಅವರೇ ಹೋಗಿ ಕೆಲಸ ನಿಲ್ಲಿಸಿದ್ದಾರೆ.
ಇವರು ಬಿಬಿಎಂಪಿಯಿಂದ ಯಾವುದೇ ಅನುಮತಿ ಕೂಡ ಪಡೆಯದೆ ಬೇಕಾಬಿಟ್ಟಿ ರಸ್ತೆಗಳನ್ನು ಅಗೆದು ಹಾಳು ಮಾಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.
ಬೊಮ್ಮನಹಳ್ಳಿ ಬಿಬಿಎಂಪಿ ವಲಯದಲ್ಲಿ ಬರುವಂತಹ ರಸ್ತೆಯಲ್ಲಿ ಅಗೆಯುವ ವೇಳೆ ಸ್ಥಳೀಯರು ಖುದ್ದಾಗಿ ಹೋಗಿ ಕಾಮಗಾರಿ ನಿಲ್ಲಿಸಿದ್ದಾರೆ. ಈ ಖಾಸಗಿ ಕಂಪನಿಗಳು ಯಾವುದೇ ಮುಂಜಾಗ್ರತೆ ಕ್ರಮಗಳು ಕೈಗೊಳ್ಳದೆ ಬಡ ಕಾರ್ಮಿಕರನ್ನು ಗುಂಡಿಯ ಒಳಗೆ ಇಳಿಸಿ ಕೆಲಸ ಮಾಡಿಸುತ್ತಿದ್ದಾರೆ ಎಂದು ಜನ ಆರೋಪ ಮಾಡಿದ್ದಾರೆ.
ಸ್ಥಳೀಯರು ಹೋಗಿ ಪ್ರಶ್ನೆ ಮಾಡಿದ್ದಾಗ ಕಂಪನಿಯ ಸಿಬ್ಬಂದಿ ಸ್ಥಳೀಯರಿಗೆ ಮಾಹಿತಿ ನೀಡಲು ತಡಪಡಿಸಿದ ಮತ್ತು ಕೂಡಲೇ ತೆಗೆದಿದ್ದ ಗುಂಡಿಯನ್ನು ಮುಚ್ಚಲು ಮುಂದಾದರು. ದಿನನಿತ್ಯ ಇಲ್ಲಿನ ಜನರಿಗೆ ಖಾಸಗಿ ಕಂಪನಿಗಳ ರಸ್ತೆ ಅಗೆದು ಹಾಳು ಮಾಡುತ್ತಿರುವುದಕ್ಕೆ ಬೇಸತ್ತು ಹೋಗಿದ್ದಾರೆ. ಬಿಬಿಎಂಪಿ ಅಧಿಕಾರಿಗಳು ಇವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಜನ ಒತ್ತಾಯಿಸುತ್ತಿದ್ದಾರೆ.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
28/07/2022 08:22 pm