ಬೆಂಗಳೂರು: ಈ ಒಂದು ಅಂಡರ್ ಪಾಸ್ ನಿರ್ಮಿಸಿದ ಕಾರಣ ಈ ರಸ್ತೆ ಮೇಲೆ ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುವಂತಾಗಿದೆ. ಅದರಲ್ಲೂ ಈ ರಸ್ತೆ ರಾಷ್ಟ್ರೀಯ ಹೆದ್ದಾರಿ ಆಗಿದ್ದರಿಂದ ಇದೇ ಅಂಡರ್ ಪಾಸ್ ಮೂಲಕ ಲಾರಿಗಳು ನಗರಕ್ಕೆ ಪ್ರವೇಶ ಮಾಡಬೇಕು. ನಗರಕ್ಕೆ ಪ್ರವೇಶ ಮಾಡುವ ಎತ್ತರದ ಲೋಡಿನ ಲಾರಿಗಳ ಚಾಲಕರು ಸಂಕಷ್ಟಕ್ಕಿ ಸಿಲುಕುಂತಾಗಿದೆ.
ಅಂಡರ್ ಪಾಸ್‌ನ ಬಳಿ ಯಾವುದೇ ಸೂಚನೆ ನಾಮಫಲಕ ಇಲ್ಲದ ಕಾರಣ ಎತ್ತರದ ಲಾರಿಗಳು ಬಂದು ಅಂಡರ್ ಪಾಸ್‌ನಲ್ಲಿ ಸಿಲುಕುತ್ತಿವೆ. ಒಮ್ಮೆ ಲಾರಿ ಅಂಡರ್ ಪಾಸ್‌ನಲ್ಲಿ ಸಿಲುಕಿ ಬಿಟ್ಟರೆ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಎತ್ತರದ ಲಾರಿಗಳು ಅಂಡರ್ಪಾಸ್‌ನ ಕೆಳಭಾಗದಲ್ಲಿ ಉಜ್ಜಿ ಅಂಡರ್ ಪಾಸ್‌ನ ಮೇಲೆ ಗೋಡೆಗಳು ಬಿರುಕು ಬಿಟ್ಟಿವೆ.
ಈ ಅಂಡರ್ ಪಾಸ್‌ನ ಸದ್ಯದ ಪರಿಸ್ಥಿತಿ ಬಗ್ಗೆ ನಮ್ಮ ಪ್ರತಿನಿಧಿ ನವೀನ್ ಸ್ಥಳದಿಂದ ನೀಡಿರುವ ವರದಿ ಇಲ್ಲಿದೆ ನೋಡಿ.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು
PublicNext
26/07/2022 06:20 pm