ಬೆಂಗಳೂರು :ದುರಸ್ಥಿ ಸ್ಥಿತಿಯಲ್ಲಿರುವ ಟ್ರಾನ್ಸ್ ಫಾರ್ಮರ್ ನಿರ್ವಹಣೆಯನ್ನು ಮುಂದುವರಿಸಿರುವ ಬೆಸ್ಕಾಂ ಕಳೆದ ಎರಡು ತಿಂಗಳಿನಲ್ಲಿ 27,787 ಟ್ರಾನ್ಸ್ ಫಾರ್ಮರ್ ಗಳನ್ನು ತನ್ನ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ ನಿರ್ವಹಣೆ ಮಾಡಿದೆ.
ಮೇ 5 ರಂದು ಟ್ರಾನ್ಸ್ ಫಾರ್ಮರ್ ಅಭಿಯಾನಕ್ಕೆ, ಇಂಧನ ಸಚಿವ ವಿ.ಸುನಿಲ್ ಕುಮಾರ್ ಚಾಲನೆ ನೀಡಿದ್ದರು. ಸಚಿವರ ಸೂಚನೆ ಮೇರೆಗೆ ಅಭಿಯಾನವನ್ನು ಮುಂದುವರಿಸಲಾಗಿದ್ದು, ರಾಜ್ಯಾದ್ಯಂತ 2 ಲಕ್ಷಕ್ಕೂ ಅಧಿಕ ಟ್ರಾನ್ಸ್ ಫಾರ್ಮರ್ ಗಳ ನಿರ್ವಹಣೆಯ ಗುರಿಯನ್ನು ಎಲ್ಲ ಎಸ್ಕಾಂಗಳಿಗೆ ನೀಡಲಾಗಿತ್ತು.
ಮೇ 5 ರಂದು ರಾಜ್ಯಾದ್ಯಂತ ಚಾಲನೆ ದೊರೆತ ಟ್ರಾನ್ಸ್ ಫಾರ್ಮರ್ ಗಳ ಅಭಿಯಾನವನ್ನು ಬೆಸ್ಕಾಂ ಮುಂದುವರಿಸಿದ್ದು, ನ್ಯೂನ್ಯತೆ ಹೊಂದಿರುವ ಹಾಗೂ ಅಸಮರ್ಪಕ ಗ್ರೌಂಡಿಂಗ್ ಸಮಸ್ಯೆ ಹೊಂದಿರುವ ಟ್ರಾನ್ಸ್ ಫಾರ್ಮರ್ ಗಳನ್ನು ನಿರ್ವಹಣೆ ಮಾಡಿದೆ. ತಾಂತ್ರಿಕ ಸಮಸ್ಯೆ ಎದುರಿಸುತ್ತಿರುವ ಹಾಗೂ ಜನನಿಬಿಡ ಪ್ರದೇಶಗಳಲ್ಲಿರುವ ಟ್ರಾನ್ಸ್ ಫಾರ್ಮರ್ ಗಳ ಸಮಗ್ರ ನಿರ್ವಹಣೆಗೆ ಬೆಸ್ಕಾಂ ಕ್ರಮಕೈಗೊಂಡಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
Kshetra Samachara
12/07/2022 10:08 pm