ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಿಬಿಎಂಪಿಯಿಂದ ಮತ್ತೊಂದು ಕಳಪೆ ಕಾಮಗಾರಿ

ಬೆಂಗಳೂರು: ಬಿಟಿಎಂ ಲೇಔಟ್ ಇಂದ ಸಿಲ್ಕ್ ಬೋರ್ಡ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಗುಂಡಿಗಳಿಗೆ ಬೈಕ್ ಸವಾರರು, ಚಾಲಕರು ಕಂಗೆಟ್ಟಿದ್ದರು. ಈ ಬಗ್ಗೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿ ಮಾಡಿತ್ತು. ಇದರಿಂದ ಎಚ್ಚೆತ್ತ ಅಧಿಕಾರಿಗಳು ಈ ಮುಖ್ಯ ರಸ್ತೆ ದುರಸ್ತಿಗೆ ಮುಂದಾಗಿದ್ದರು. ಆದರೆ ರಸ್ತೆಗುಂಡಿಗಳನ್ನು ಟಾರ್ ಹಾಕಿ ಕಾಟಾಚಾರಕ್ಕೆ ಮುಚ್ಚಿ ಹೋಗಿದ್ದಾರೆ. ಬಿಬಿಎಂಪಿ ಮಾಡಿರುವ ಈ ಕಳಪೆ ಕಾಮಗಾರಿಯೇ ಹೇಗಿದೆ ಅಂತ ನೋಡೋಣ ಬನ್ನಿ.

ಸದ್ಯ ಹಾಕಿರುವ ಟಾರ್‌ ಕಿತ್ತು ಹಾಕುವ ಮಟ್ಟದಲ್ಲಿ ಕಳಪೆ ಕಾಮಗಾರಿ ಮಾಡಿರುವ ಬಿಬಿಎಂಪಿ ಜನರ ಆಕ್ರೋಶಕ್ಕೆ ಗುರಿಯಾಗಿದೆ. ಬಿಬಿಎಂಪಿ ಮಾಡಿರುವ ಈ ಕಳಪೆ ಕಾಮಗಾರಿಗೆ ಏನ್ ಹೇಳಬೇಕೋ ಗೊತ್ತಿಲ್ಲ. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಕಳಪೆ ಕಾಮಗಾರಿ ಮಾಡುವ ಬಿಬಿಎಂಪಿ ಯಾವಾಗ ಬುದ್ಧಿ ಕಲಿಯುತ್ತೋ ಅಂತ ಗೊತ್ತಿಲ್ಲ. ಈಗಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ರಸ್ತೆ ಸರಿಪಡಿಸಬೇಕು ಎನ್ನುವುದು ಪಬ್ಲಿಕ್ ನೆಕ್ಸ್ಟ ಆಗ್ರಹ.

ವರದಿ: ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.

Edited By :
PublicNext

PublicNext

30/06/2022 09:09 pm

Cinque Terre

57.04 K

Cinque Terre

0

ಸಂಬಂಧಿತ ಸುದ್ದಿ