ಬೆಂಗಳೂರು:ನಗರದಲ್ಲಿ ಬ್ಯಾನರ್ ಅಳವಡಿಕೆ ಸಂಬಂಧ ನೀಡಿದ್ದ ಗಡುವು ಮುಗಿದಿದೆ. ಯಾರಾದರೂ ಅನಧಿಕೃತ ಫಲಕಗಳನ್ನು ಅಳವಡಿಸಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಿದ್ದ ಹಿನ್ನೆಲೆ ಜೂನ್ 18 ರವರೆಗೂ ಫ್ಲೆಕ್ಸ್ ಬ್ಯಾನರ್ ತೆರವುಗೊಳಿಸಲು ಸೂಚಿಸಲಾಗಿತ್ತು. ಅದರಂತೆ 16 ಸಾವಿರಕ್ಕೂ ಅಧಿಕ ಬ್ಯಾನರ್, ಫ್ಲೆಕ್ಸ್ ತೆರವು ಮಾಡಿದ್ದೇವೆ ಎಂದಿದ್ದಾರೆ.
25 ನೇ ತಾರೀಖಿನ ನಂತರ ಯಾವುದೇ ಫ್ಲೆಕ್ಸ್, ಬ್ಯಾನರ್ ನಗರದಲ್ಲಿ ಇರುವುದಿಲ್ಲ. ಕೆಲ ಕಡೆ ರಾತ್ರೋರಾತ್ರಿ ಫ್ಲೆಕ್ಸ್, ಬ್ಯಾನರ್ ಗಳನ್ನು ಅಳವಡಿಕೆ ಮಾಡುತ್ತಾರೆ. ಆದರೆ, ಅದನ್ನು ತೆರವು ಮಾಡುವಷ್ಟು ಸಿಬ್ಬಂದಿ ನಮ್ಮ ಬಳಿ ಇಲ್ಲ ಎಂದು ಹೇಳಿದ್ದಾರೆ.
ಅನಧಿಕೃತ ಫ್ಲೆಕ್ಸ್ ಹಾಕಿದವರ ವಿರುದ್ಧ ಕ್ರಮ:
ಒಂದು ವಾರದ ಸಮಯ ಈಗಾಗಲೇ ನೀಡಿದ್ದೀವಿ. ಅಷ್ಟರ ಮೇಲೂ ಫ್ಲೆಕ್ಸ್, ಬ್ಯಾನರ್ ಹಾಕಿದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರತಿ ವಾರ ಸರ್ವೆ:
ರಸ್ತೆ ಗುಂಡಿ ದಿನವು ಕಂಡುಬರುತ್ತವೆ. ಈ ಕುರಿತು ಪ್ರತಿವಾರ ಸರ್ವೆ ಮಾಡುತ್ತಿದ್ದೇವೆ. ಪ್ರತಿವಾರ ಮೂರು ಸಾವಿರ ಗುಂಡಿಗಳು ಹೊಸದಾಗಿ ಪತ್ತೆಯಾಗುತ್ತಿವೆ ಎಂದು ಹೇಳಿದ್ದಾರೆ.
Kshetra Samachara
22/06/2022 08:21 pm