ಬೆಂಗಳುರು: ಸದಾ ವಾಹನಗಳಿಂದ ತುಂಬಿಕೊಂಡಿರೊ ರಸ್ತೆಯಲ್ಲಿ ಮೊನ್ನೆ ಧೀಡಿರ್ ಅಂತ ಸ್ಟ್ರೀಟ್ ಲೈಟ್ ಕಂಬ ಉರುಳಿ ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದಿದೆ.ಆದ್ರೆ ಅದೃಷ್ಟವಶಾತ್ ಬೈಕ್ ಸಾವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ವಿಕ್ಟೋರಿಯಾ ಆಸ್ಪತ್ರೆ ಮುಂಭಾಗದಲ್ಲಿರುವ ಕೆ.ಆರ್.ಮಾರ್ಕೆಟ್ ರಸ್ತೆಯಲ್ಲಿ ಇದ್ದಕ್ಕಿದ್ದಂತೆ ಸ್ಟ್ರೀಟ್ ಲೈಟ್ ಕಂಬವೊಂದು ಧರೆಗುರುಳಿತ್ತು.
ಒಂದೇ ಒಂದು ಕ್ಷಣದಲ್ಲಿ ಬೈಕ್ ಸವಾರ ಸಾವಿನ ಕದತಟ್ಟಿ ಬಂದಿದ್ದ ಅಂತಾನೆ ಹೇಳಬಹುದು. ಸೋಮವಾರ ಮಧ್ಯಾಹ್ನ 1.15 ರ ಸಮಯ ಶ್ರೀನಗರ ನಿವಾಸಿಯಾದ ಸೋಮಶೇಖರ್ ಕೆಲಸ ನಿಮಿತ್ತ ಕೆ.ಆರ್.ರಸ್ತೆ ಮಾರ್ಗವಾಗಿ ಅವಿನ್ಯೂ ರೋಡ್ ಕಡೆಗೆ ತೆರಳ್ತಾ ಇದ್ರು.ಈ ವೇಳೆ ವಿಕ್ಟೋರಿಯಾ ಆಸ್ಪತ್ರೆ ಮುಂಭಾಗ ಮುಖ್ಯರಸ್ತೆ ಮಾರ್ಗವಾಗಿ ಸ್ಟ್ರೀಟ್ ಲೈಟ್ ಕಂಬವೊಂದು ಕಟ್ ಆಗಿ ಬೈಕ್ ಮೇಲೆ ಉರುಳಿ ಬಿದ್ದಿದೆ.
ಪೋಲ್ ಬಿದ್ದ ರಭಸಕ್ಕೆ ಬೈಕ್ ನಜ್ಜುಗುಜ್ಜಾಗಿದೆ.ಬೈಕ್ ಸವಾರನ ಕೈಗೆ ಗಾಯವಾಗಿದೆ.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಬಂದ ಸೋಮಶೇಖರ್ ಬೆಸ್ಕಾಂ ನಿರ್ಲಕ್ಷ್ಯದ ವಿರುದ್ಧ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇನ್ನೂ ಘಟನೆಯಿಂದ ಶಾಕ್ ಗೆ ಒಳಗಾಗಿರೊ ಸ್ಥಳೀಯರು ಕೂಡ ಬೆಸ್ಕಾಂ ವಿರುದ್ಧ ಆಕ್ರೋಶ ಹೊರಹಾಕಿದ್ರು. ಹಳೇಯ ಕಂಬಗಳು ರಸ್ತೆಯುದ್ದಕ್ಕೂ ಇದೆ.ಇದನ್ನ ಸರಿಯಾದ ನಿರ್ವಹಣೆ ಬೆಸ್ಕಾಂ ಮೇಲಿದೆ.
PublicNext
15/06/2022 08:58 pm