ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬರೋಬ್ಬರಿ 2 ಸಾವಿರ ಕೋಟಿ ಸಾಲದ ಸುಳಿಯಲ್ಲಿ ಸಿಲುಕಿದೆ ಬಿಎಂಟಿಸಿ

ಬಿಗ್ ಎಕ್ಸ್ ಕ್ಲೂಸಿವ್: ಗಣೇಶ್ ಹೆಗಡೆ

ಬೆಂಗಳೂರು: ಒಂದು ಕಾಲವಿತ್ತು. ದೇಶದ ನಂಬರ್‌ ಒನ್ ಸಾರಿಗೆ ಸಂಸ್ಥೆ ಎಂಬ ಹೆಗ್ಗಳಿಕೆಯನ್ನು ನಮ್ಮ ಬಿಎಂಟಿಸಿ ಪಡೆದುಕೊಂಡಿತ್ತು. ಇದೀಗ ಈ ಸಾರಿಗೆ ಸಂಸ್ಥೆಯ ಪರಿಸ್ಥಿತಿ ಮಾತ್ರ ಊಹಿಸಲು ಸಾಧ್ಯವಾಗದಷ್ಟು ಶೋಚನೀಯ ಸ್ಥಿತಿಗೆ ತಲುಪಿದೆ.

BMTC ಬೆಂಗಳೂರು ಜನರ ಜೀವನಾಡಿ. ಒಂದು ದಿನ ಬಸ್ ನಿಂತುಕೊಂಡರೇ ಬೆಂಗಳೂರಿಗರ ಅಸ್ತವ್ಯಸ್ತವಾಗುಷ್ಟರ ಮಟ್ಟಿಗೆ ಜನರು ಬಿಎಂಟಿಸಿ ನಂಬಿಕೊಂಡಿದ್ದಾರೆ. ಆದರೆ ಇಂತಹ ನಿಗಮವೇ ದಯನಿಯ ಪರಿಸ್ಥಿತಿಗೆ ಬಂದು ನಿಂತುಕೊಂಡಿದೆ. ಲಾಭದ ಹಳಿಗೆ ಬಾರದಷ್ಟು ದೂರಕ್ಕೆ ಹೋಗಿದ್ದು, ನಷ್ಟದಿಂದ ಪಾರಾಗಲು ಸಾವಿರಾರು ಕೋಟಿ ಸಾಲ ಪಡೆದು ಬಡ್ಡಿ ತಿರಿಸಲಾಗದೇ ಹೆಣಗಾಡುತ್ತಿದೆ.

ಆಡಳಿತ ವೈಫಲ್ಯ ಹಾಗೂ ದುಂದುವೆಚ್ಚಕ್ಕೆ ನಿಯಂತ್ರಣ ಹಾಕಲು ಸಾಧ್ಯವಾಗದೇ ಇರುವುದರಿಂದ ನಿಗಮ ಆರ್ಥಿಕವಾಗಿ ಸಂಪೂರ್ಣ ದಿವಾಳಿಯಾಗಿದೆ. ಕಳೆದ ಹಲವು ವರ್ಷಗಳಿಂದ ಸಾಲದ ಸುಳಿಯಲ್ಲಿ ಸಿಲುಕಿ ನಲುಗುತ್ತಿದ್ದರೂ ಅದನ್ನ ಮೇಲಕ್ಕೆತ್ತಲು ಸಾಧ್ಯವಾಗದ ಸ್ಥಿತಿಯಲ್ಲಿದೆ ಸರ್ಕಾರ. BMTCಯ ಇಂತಹ ದಯನೀಯ ಪರಿಸ್ಥಿತಿಗೆ ನಿಜವಾದ ಕಾರಣ ಯಾರು ಅನ್ನುವ ಪ್ರಶ್ನೆಗೆ ನಿಗಮದ ಅಧಿಕಾರಿಗಳು, ಸಾರಿಗೆ ಸಚಿವರೇ ಉತ್ತರ ನೀಡಬೇಕಿದೆ.BMTC ಇತಿಹಾಸದಲ್ಲೇ ಅತ್ಯಧಿಕ ಸಾಲ ಪಡೆದಿದ್ದು 2022ರ ಮಾರ್ಚ್ ವರಿಗೆ ಬರೋಬ್ಬರಿ 2 ಸಾವಿರ ಕೋಟಿ ರೂ. ಸಾಲ ಹೊಂದಿದೆ.

ಸಾಲದ ವಿವರ ಪಬ್ಲಿಕ್ ನೆಕ್ಸ್ಟ್ ದೊರೆತಿದ್ದು, 2017ರಲ್ಲಿ 100 ಕೋಟಿ ರೂ. ಕೆನರಾ ಬ್ಯಾಂಕ್‌ನಿಂದ ಸಾಲ, 2018ರಲ್ಲಿ 125 ಕೋಟಿ KUIDFC ಬ್ಯಾಂಕ್ ನಿಂದ ಸಾಲ, 2019ರಲ್ಲಿ 19.95 ಕೋಟಿ ಕೆನರಾ ಬ್ಯಾಂಕ್ ನಿಂದ ಸಾಲ, 2019-2020ರಲ್ಲಿ 160 ಕೋಟಿ ಸಾಲ, 2020-21ರಲ್ಲಿ 407 ಕೋಟಿ ಸಾಲ, 2022ರ ಮಾರ್ಚ್ನಲ್ಲಿ 183 ಕೋಟಿ KUIDFC ನಿಂದ ಸಾಲ ಪಡೆಯಲಾಗಿದ್ದು ಇದರ ಬಡ್ಡಿ ಮೊತ್ತವೇ 400-500 ಕೋಟಿ ಯಷ್ಟಿದೆ.

ಇನ್ನೂ ಸರ್ಕಾರಿ ವಿವಿಧ ಇಲಾಖೆಯಿಂದ ಕೂಡಾ ಕೋಟಿ- ಕೋಟಿ ಹಣ ಬಿಎಂಟಿಸಿಗೆ ಬರ ಬೇಕಿದೆ. ಇದರಿಂದಾಗಿಯೇ ಬಸ್ ಪಾಸ್ ನಂತಹ ಸೌಲಭ್ಯಗಳನ್ನು ಸ್ಥಗಿತ ಮಾಡಲಾಗುತ್ತಿದೆ. ಒಟ್ಟಿನಲ್ಲಿ ಇದೇ ಪರಿಸ್ಥಿತಿ ಮುಂದೂವರಿದರೆ ಬಿಎಂಟಿಸಿ ದಿವಾಳಿ ಆಗುವುದರಲ್ಲಿ ಸಂಶಯವೇ ಇಲ್ಲ.

ಗಣೇಶ್ ಹೆಗಡೆ ಪಬ್ಲಿಕ್ ನೆಕ್ಷ್ಟ್ ಬೆಂಗಳೂರು

Edited By : Manjunath H D
PublicNext

PublicNext

03/06/2022 09:36 am

Cinque Terre

33.05 K

Cinque Terre

1

ಸಂಬಂಧಿತ ಸುದ್ದಿ