ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಮಳೆ ಹಾನಿ 40% ಪರಿಹಾರ ನೀಡಿದ್ದೇವೆ : ಬಿಬಿಎಂಪಿ ಸ್ಪಷ್ಟನೆ

ಬೆಂಗಳೂರು ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಪರಿಹಾರ ಪಡೆಯಲು ಇದುವರೆಗೆ 3,453 ಅರ್ಜಿಗಳು ಬಂದಿವೆ. ಇದರಲ್ಲಿ ಶೇ.40 ರಷ್ಟು ಮನೆಗಳಿಗೆ ಪರಿಹಾರ ನೀಡಲಾಗಿದೆ. ಬಾಕಿ ಉಳಿದ ಶೇ.60ರಷ್ಟು ಮನೆಗಳಿಗೆ ಪರಿಹಾರ ಸಂಜೆಯೊಳಗೆ ನೀಡಲಾಗುವುದು ಎಂದು ಪಾಲಿಕೆ ವಿಶೇಷ ಆಯುಕ್ತ ರಂಗಪ್ಪ ಮಾಹಿತಿ ನೀಡಿದರು.

ನಿಯಮದ ಪ್ರಕಾರ, ನೆಲಮಹಡಿಗೆ ಮಾತ್ರ ಪರಿಹಾರ ನೀಡಲಾಗುತ್ತಿದೆ. ಮೊದಲನೇಯ ಮಹಡಿಯಲ್ಲಿರುವವರಿಗೆ ಹೆಚ್ಚು ಅನಾಹುತವಾಗಿಲ್ಲ. ನೆಲಮಹಡಿಯಲ್ಲಿ ಇದ್ದ ಮನೆಗಳಲ್ಲಿನ ವಸ್ತುಗಳು ಹಾನಿಗೊಳಗಾಗಿವೆ. ಹೀಗಾಗಿ ನೆಲಮಹಡಿಯಲ್ಲಿರುವವರಿಗೆ ಮಾತ್ರ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.

Edited By :
Kshetra Samachara

Kshetra Samachara

23/05/2022 09:54 pm

Cinque Terre

3.02 K

Cinque Terre

0

ಸಂಬಂಧಿತ ಸುದ್ದಿ