ಬೆಂಗಳೂರು: ಇಂದಿರಾ ಕ್ಯಾಂಟೀನ್ ಗೆ ಈಗ ಊಟ ಸರಬರಾಜು ಮಾಡಲು ಇಸ್ಕಾನ್ ಮುಂದಾಗಿದೆ. ಆದ್ರೆ ಈ ಹಿಂದಿನ ಕೋವಿಡ್ ಟೈಂ ನಲ್ಲಿ ಗುತ್ತಿಗೆದಾರರು ಮಾಡಿದ ಖರ್ಚು ಸಹ ಇನ್ನೂ ಬಿಬಿಎಂಪಿ ಪಾವತಿ ಮಾಡಿಲ್ಲ. ಬಿಬಿಎಂಪಿಯಿಂದ 10 ತಿಂಗಳಿಂದ ಬಿಲ್ಲು ಪಾವತಿಯಾಗಿಲ್ಲ..
ಕೊರೊನಾ ಸಂದರ್ಭದಲ್ಲಿ ಎರಡು ವರ್ಷ ಪೌರ ಕಾರ್ಮಿಕರಿಗೆ ನೀಡಿದ ಊಟದ ಬಿಲ್ಲು ಪಾವತಿಯಾಗಿಲ್ಲ. ಕೊವಿಡ್ ಕೇರ್ ಸೆಂಟರ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಎರಡು ವರ್ಷಗಳಿಂದ ನೀಡಿದ ಊಟದ ಬಿಲ್ಲು 3 ಕೋಟಿ ಇನ್ನು ಬಿ.ಬಿ.ಎಂ.ಪಿ.ಯಿಂದ ಬಂದೇ ಇಲ್ಲ. ನಮಗೆ ಬಿಬಿಎಂಪಿಯಿಂದ ಸಕಾಲಕ್ಕೆ ಹಣ ಬಿಡುಗಡೆಯಾದರೆ,ಕ್ಯಾಂಟೀನ್ ನಲ್ಲಿ ಇನ್ನು ಉತ್ತಮ ಸೌಲಭ್ಯ ಒದಗಿಸಲು ಸಿದ್ದ. ಸದ್ಯಕ್ಕೆ ಬಿಲ್ ಪಾವತಿ ಮಾಡಿದ್ರೆ ಅಷ್ಟೆ ಸಾಕಪ್ಪ ಅನ್ನುತ್ತಿದ್ದಾರೆ ಶೆಫ್ ಟಾಕ್ ವ್ಯವಸ್ಥಾಪಕ ನಿರ್ದೇಶಕ ಗೋವಿಂದಬಾಬು ಪೂಜಾರಿ.
ಇಂದಿರಾ ಕ್ಯಾಂಟೀನ್ ಒಳ ವಿಷಯಗಳ ಬಗ್ಗೆ ನಿಜವಾದ ಸತ್ಯವನ್ನೂ ಈಗ ಬಿಚ್ಚಿಟ್ಟಿದ್ದಾರೆ ಗೋವಿಂದಬಾಬು ಪೂಜಾರಿ.
PublicNext
17/05/2022 12:09 pm