ಬೆಂಗಳೂರು: ಕಳೆದ ಕೆಲವು ದಿನಗಳಿಂದ ಬಿಬಿಎಂಪಿ ಕಸ ಲಾರಿಗಳು ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿವೆ. ಈಗ ಸರಿಯಾದ ನಿರ್ವಹಣೆ ಆಗದೆ ಮತ್ತೆ ಸುದ್ದಿಯಲ್ಲಿವೆ. ಬೆಂಗಳೂರಿನ ಬನಶಂಕರಿ ಸಿಗ್ನಲ್‌ನಲ್ಲಿ ಕಸದ ಲಾರಿಯಿಂದ ನೀರು ರಸ್ತೆಯ ಮೇಲೆ ಸೋರಿಕೆ ಆಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಿಂದ ವಾಹನ ಸವಾರರು ಪರದಾಡಬೇಕಾಗಿತ್ತು.
ಸೂಕ್ತವಾಗಿ ನಿರ್ವಹಣೆ ಮಾಡದ ಕಾರಣ ಈ ರೀತಿಯ ಲಾರಿಗಳಿಂದ ಕಸದ ನೀರು ರಸ್ತೆಯ ಮೇಲೆ ಸೋರಿಕೆ ಆಗುತ್ತಿದೆ. ಕೂಡಲೇ ಬಿಬಿಎಂಪಿ ಕಸದ ಲಾರಿ ಗುತ್ತಿಗೆದಾರರಿಗೆ ತಮ್ಮ ಲಾರಿಗಳನ್ನು ಸೂಕ್ತ ನಿರ್ವಹಣೆ ಮಾಡಬೇಕೆಂದು ಆದೇಶ ಮಾಡಬೇಕು ಎಂಬುದು ಪಬ್ಲಿಕ್ ಆಗ್ರಹ.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
27/04/2022 10:23 am