ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮಹದೇವಪುರ ಕ್ಷೇತ್ರದ ಆವಲಹಳ್ಳಿಯಲ್ಲಿ ಜಿಲ್ಲಾಧಿಕಾರಿಗಳ ನಡೆ-ಹಳ್ಳಿ ಕಡೆ ಕಾರ್ಯಕ್ರಮ

ಬೆಂಗಳೂರು: ಮಹದೇವಪುರ ಕ್ಷೇತ್ರದ ಆವಲಹಳ್ಳಿ ಗ್ರಾಮದ ಮುನೇಶ್ವರ ದೇವಾಲಯ ಆವರಣದಲ್ಲಿ ಪೂರ್ವ ತಾಲೂಕು ತಹಶೀಲ್ದಾರ ಕಚೇರಿ ವತಿಯಿಂದ ಆಯೋಜಿಸಿದ್ದ ಜಿಲ್ಲಾಧಿಕಾರಿಗಳ ನಡೆ-ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಸಾರ್ವಜನಿಕರು ತಮ್ಮ ಅಹವಾಲಗಳನ್ನು ಸಲ್ಲಿಸಿದರು. ಜಿಲ್ಲಾಧಿಕಾರಿಗಳ ಗೈರುಹಾಜರಿಯಲ್ಲಿ ಉಪವಿಭಾಗಧಿಕಾರಿ ಎಂಜಿ ಶಿವಣ್ಣ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.

ಕೆಲ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರವನ್ನು ಸೂಚಿಸಲಾಯಿತು. ನಂತರ ಉಪವಿಭಾಗಧಿಕಾರಿ ಎಂ.ಜಿ.ಶಿವಣ್ಣ ಅವರು ಆವಲಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅಧಿಕಾರಿಗಳ ಮತ್ತು ಗ್ರಾ.ಪಂ ಸದಸ್ಯರ ಜೊತೆಗೆ ಪರಿವೀಕ್ಷಣೆ ಮಾಡಿ ಅಂಗನವಾಡಿಗೆ ಭೇಟಿ ನೀಡಿದರು. ಅಲ್ಲಿ ಕೊಠಡಿಗಳ ಸಮಸ್ಯೆ ಇರುವುದನ್ನು ಗಮನಕ್ಕೆ ತಂದು ಸರ್ಕಾರದ ವತಿಯಿಂದ ಮೂರು‌ ಕೊಠಡಿಗಳನ್ನ ನಿರ್ಮಾಣ ಮಾಡಿಕೊಡಲು ಭರವಸೆ ನೀಡಿದರು. ನಂತರ ಚರಂಡಿ ನೀರು ಹೋಗಲು ಕಾಲುವೆ ನಿರ್ಮಾಣಕ್ಕೆ ಜಾಗವನ್ನ ಭೂಮಿಯನ್ನು ನೀಡದ ಜಾಗದ ಮಾಲೀಕರ ಜೊತೆಗೆ ಮಾತನಾಡಿ ಮನವೊಲಿಸಿದರು.

Edited By :
Kshetra Samachara

Kshetra Samachara

19/04/2022 08:47 pm

Cinque Terre

3 K

Cinque Terre

0

ಸಂಬಂಧಿತ ಸುದ್ದಿ