ಬೆಂಗಳೂರು - ಬೆಂಗಳೂರು ಜಲ ಮಂಡಳಿಯಿಂದ ನಗರದ ವಿವಿಧ ಉಪ ವಿಭಾಗದಲ್ಲಿ ಗುರುವಾರ ನೀರಿನ ಅದಾಲತ್ ಜರುಗಲಿದೆ.
ಈ ಸಂದರ್ಭದಲ್ಲಿ ನೀರಿನ ಬಿಲ್ಲು, ನೀರು ಒಳಚರಂಡಿ ಕಲ್ಪಿಸುವ ವಿಳಂಬ ,ಗೃಹ ಬಳಕೆಯಿಂದ ಗೃಹೇತರ ಬಳಕೆಯ ಪರಿವರ್ತನೆ ವಿಳಂಬ, ಕಲುಷಿತ ನೀರು ಮಿಶ್ರಣ ಕುರಿತಾದ ದೂರುಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಬಹುದು.
ಅಗ್ನೇಯ -೬ ಬಿಟಿಎಂ ಲೇಔಟ್ 1,2,3 ಹಂತ , ಪೂರ್ವ -೨ ಕೆ.ಅರ್.ಪುರಂ, ರಾಮಮೂರ್ತಿ ನಗರ, ದೇವಸಂದ್ರ, ಬಸವನಪುರ , ವಿಜನಾಪುರ, ದೂರವಾಣಿನಗರ ಪೂರ್ವ ವಿಲೇಜ್ -2 ವರ್ತೂರು, ಕಾಡುಗೋಡಿ , ದಕ್ಷಿಣ ವಿಲೇಜ್ -1 ಅಂಜನಾಪುರ, ಗೊಟ್ಟಿಗೆರೆ, ಬ್ಯಾಂಕ್ ಅಫೀಸರ್ಸ್ ಲೇ ಔಟ್, ಪಶ್ಚಿಮ -3 ಚಂದ್ರಲೇ ಔಟ್, ವಿಜಯ ನಗರ, ಮೂಡಲಪಾಳ್ಯ , ನೈರುತ್ಯ-೩ ಬಸವನಗುಡಿ , ಎಂ ಎನ್ ಕೆ ಪಾರ್ಕ್ , ಅಗ್ನೇಯ -೩ ಹಲಸೂರು, ದೊಮ್ಮಲೂರು, ಮಾರತ್ ಹಳ್ಳಿ , ವಾಯುವ್ಯ -೬ ಹೆಗ್ಗನಹಳ್ಳಿ, ಕೊಟ್ಟಿಗೆಪಾಳ್ಯ, ಹೇರೋಹಳ್ಳಿ, ಕೇಂದ್ರ -೩ ಪ್ರೇಜರ್ ಟೌನ್, ಪಿಳ್ಳಣ್ಣ ಗಾರ್ಡನ್ , ವಾಯುವ್ಯ -೨ ರಾಜಾಜಿ ನಗರ, ಕಾಮಾಕ್ಷಿಪಾಳ್ಯ, ಅಗ್ರಹಾರ ದಾಸರಹಳ್ಳಿ,ಕಮಲಾ ನಗರ, ವೆಸ್ಟ್ ಅಪ್ ಕಾರ್ಡ್ ರೋಡ್, ಕೇತಮಾರನಹಳ್ಳಿ, ಮಹಾಲಕ್ಷ್ಮಿ ಲೇಔಟ್ , ಉತ್ತರ -೩ ಸಹಕಾರ ನಗರ, ವಿದ್ಯಾರಣ್ಯಪುರ, ಸಿಂಗಾಪುರ , ಈಶಾನ್ಯ -೨ ಕೆಂಪೇಗೌಡ ಟವರ್ , ಜಯ ಮಹಲ್, ಕುಮಾರ ಪಾರ್ಕ್,ಬೆಳಗ್ಗೆ 9.30 ರಿಂದ 11 ಗಂಟೆವರೆಗೆ ಮೇಲಿನ ಏರಿಯಾಗಳಲ್ಲಿ ಅದಾಲತ್ ನಡೆಯಲಿದೆ.
Kshetra Samachara
16/11/2021 06:07 pm