ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು ; ಸಮಸ್ಯೆಗಳ ಆಗರವಾಗಿರುವ ಮಾರಪ್ಪನಪಾಳ್ಯ ವಾರ್ಡ್,ಅಭಿವೃದ್ಧಿಯತ್ತ ಜನರ ಚಿತ್ತ

ಹೆಚ್ಚಾಗಿ ಮಧ್ಯಮ ವರ್ಗದವರೇ ವಾಸಿಸುತ್ತಿರುವ ನಗರದ ಮಾರಪ್ಪನಪಾಳ್ಯ ವಾರ್ಡ್ ಜನರು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದು,ಅಭಿವೃದ್ಧಿಯತ್ತ ಮುಖ‌ ಮಾಡಿದ್ದಾರೆ. ನಗರದ ಮಹಾಲಕ್ಷ್ಮಿ ಲೇ ಔಟ್ ವಿಧಾನ ಸಭಾ ಕ್ಷೇತ್ರದ ಮಾರಪ್ಪನಪಾಳ್ಯ ವಾರ್ಡ್ ನಲ್ಲಿ ಸರಿ ಸುಮಾರು 37 ಸಾವಿರ ಜನ ವಾಸ್ತವ್ಯವಿದ್ದು,ಕೃಷ್ಣಾನಂದ ನಗರ, ಕೆ ಹೆಚ್ ಬಿ ಕಾಲೋನಿ ,ವಿಜಯಾ ನಂದ ನಗರ, ಶಂಕರ್ ನಗರ, ಶ್ರೀಕಂಟೇಶ್ವರ್ ನಗರ , ಅಶೋಕ ಪುರಂ ನಗರಗಳು ಹಲವು ಸಮಸ್ಯೆಗಳಿಂದ ಕೂಡಿದ್ದು ಅಭಿವೃದ್ಧಿ ಮರೀಚಿಕೆಯಾಗಿದೆ.

ವಾರ್ಡ್ ನಲ್ಲಿ ಮುಖ್ಯವಾಗಿ ಕಸದ ಸಮಸ್ಯೆ ಇದ್ದು,ಸರಿಯಾಗಿ ತಾಜ್ಯ ವಿಲೇವಾರಿ ಕಾರ್ಯ ಆಗ್ತಿಲ್ಲ,ಇದರ ಜತೆ- ಜತೆಗೆ ಪುಟ್ ಪಾತ್ ಅತಿಕ್ರಮಣ, ಹದಗೆಟ್ಟ ರಸ್ತೆಗಳು, ಬೀದಿ ದೀಪ ಗಳ ನಿರ್ವಹಣಾ ವೈಫಲ್ಯ,ಪರಿಣಾಮ ರಾತ್ರಿ ಹೊತ್ತು ಕಳ್ಳತನ ಪ್ರಕರಣಗಳು ಹೆಚ್ಚಾಗಿದೆ.ಇನ್ನೂ ವಾರ್ಡ್ ನಂ 44 ರಲ್ಲಿ ಆರ್ ಎಮ್ ಸಿ ಯಾರ್ಡ್ ಕಸದ ವಿಲೇವಾರಿ ಅಗ್ತಿಲ್ಲ. ಹಾಗೇನೆ ವ್ಯಾಪಾರಿಗಳನ್ನು ಬೇರೆಡೆ ಸ್ಥಳಾಂತರ ಮಾಡಿದ ಪರಿಣಾಮ ವ್ಯಾಪಾರಾ ವಹಿವಾಟು ಡಲ್ ಆಗಿದೆ. ಬಿಸಿನೆಸ್ ಇಲ್ಲದೆ ವ್ಯಾಪಾರಿಗಳು ಪರದಾಡಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.

ಇದೇ ವಾರ್ಡ್ ನಲ್ಲಿ ಈ ಹಿಂದೆ ಇಂದಂತಹ ಮಾಜಿ ಪಾಲಿಕೆ ಸದಸ್ಯ ಎಂ. ಮಹದೇವ್ ರವರಿಂದ ಕಳೆದ ಐದು ವರ್ಷದಲ್ಲಿ 70 ಕೋಟಿ ಅನುದಾನ ಮಂಜೂರು ಅಗಿದೆ. ಅದರಲ್ಲಿ 13 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಸರ್ಕಾರಿ ಶಾಲಾ- ಕಾಲೇಜು , 5 ಕೋಟಿ ವೆಚ್ಚದಲ್ಲಿ ಅಂಬೇಡ್ಕರ್ ಭವನ, ಐದು ಪಾರ್ಕ್ ಗಳಿಗೆ ನೀರು ಸರಬರಾಜು ಮಾಡಲು ಒಂದು ಲಕ್ಷ ಲೀಟರ್ ಸಾಮರ್ಥ್ಯ ದ ಪ್ಲಾಂಟ್ ನಿರ್ಮಾಣವಾಗಿದೆ.‌ ವಾರ್ಡ್ ರಸ್ತೆಗಳ ದುರಸ್ಥಿ, ಡಾಂಬರೀಕರಣಕ್ಕೆ 20 ಕೋಟಿ ರೂ . ಖರ್ಚು ಮಾಡಲಾಗಿದೆ. ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಜತೆ ಎಕ್ಸ್ ಕಾರ್ಪೊರೇಟರ್ ಮಹದೇವ್ ಮಾತನಾಡಿದ್ದಾರೆ ಕೇಳಿ.

ಕುಂದು ಕೊರತೆಗಳಿಂದಲೇ ಜನಸಾಮಾನ್ಯರ ಕೆಂಗಣ್ಣಿಗೆ ಗುರಿಯಾದ ಈ ವಾರ್ಡ್ ಸಚಿವ ಗೋಪಾಲಯ್ಯ ರವರ ಮಹಾಲಕ್ಷ್ಮಿ ಲೇಔಟ್ ವಿಧಾನ ಸಭಾ ಕ್ಷೇತ್ರದಲ್ಲಿ ಬರುತ್ತದೆ. ಈ ಹಿನ್ನಲೆಯಲ್ಲಿ ಇದು ಸಚಿವರ ಕ್ಷೇತ್ರವಾಗಿರುವುದರಿಂದ ಮತ್ತಷ್ಟು ಅಭಿವೃದ್ಧಿ ಕೆಲಸ ಆಗಬೇಕೆಂಬ ಒತ್ತಾಸೆ ಸ್ಥಳೀಯರದ್ದಾಗಿದೆ.

Edited By :
Kshetra Samachara

Kshetra Samachara

22/02/2022 06:05 pm

Cinque Terre

10.01 K

Cinque Terre

0

ಸಂಬಂಧಿತ ಸುದ್ದಿ