ಬೆಂಗಳೂರು ನಗರ ಜಿಲ್ಲೆ ಯಲಹಂಕ ತಾಲೂಕು ಬಾಗಲೂರು ರಸ್ತೆ ರೇವಾ ಜಂಕ್ಷನ್ ನಿಂದ BSF ಮಾರ್ಗವಾಗಿ ಹೊಸಹಳ್ಳಿಗೆ ಸಂಪರ್ಕ ಕಲ್ಪಿಸುವ 31ಮೀಟರ್ ಅಗಲದ ರಸ್ತೆ ನಿರ್ಮಾಣಕ್ಕೆ ಸರ್ಕಾರ ಯೋಜಿಸಿದೆ.
ಸಾತನೂರು ಗ್ರಾಮದ ಸರ್ವೆ ನಂಬರ್ 67ರಲ್ಲಿ ಸುಮಾರು 3ಎಕರೆಗೂ ಹೆಚ್ಚು ಸರ್ಕಾರಿ ಜಾಗ ಇದೆ. ಈ ಜಾಗದ ಸರ್ಕಾರಿ ರಸ್ತೆಯ 3ಗುಂಟೆ ಜಾಗದಲ್ಲಿ ಶೆಡ್, ಅಂಗಡಿ ನಿರ್ಮಾಣ ಮಾಡಲಾಗಿತ್ತು.
ಈ ಸಂಬಂಧ ಯಲಹಂಕ ಕಂದಾಯ ಅಧಿಕಾರಿಗಳು ಒತ್ತುವರಿದಾರರಿಗೆ ನೋಟೀಸ್ ನೀಡಿ, ಬಾಗಲೂರು ಪೊಲೀಸರು & BMTF ಸಿಬ್ಬಂದಿ ಜೊತೆಗೆ ಡೆಮೊಲಿಷನ್ ಮಾಡಿದರು. ಈ ವೇಳೆ ಅಕ್ಕಪಕ್ಕದ ಜನ ನಮ್ಮ ನಿವೇಶನ & ಮನೆಗಳಿಗೂ ತೊಂದರೆ ಆಗ್ತಿದೆ.
ರತ್ನಮಹಲ್ ಸಂಸ್ಥೆಯ ಬಸ್ ನಿಲ್ದಾಣಕ್ಕಾಗಿ ರಸ್ತೆ ಅಕ್ಕಪಕ್ಕದ ಎಲ್ಲರಿಗೂ ತೊಂದರೆ ಕೊಡುವುದು ಎಷ್ಟರಮಟ್ಟಿಗೆ ಸರಿ ಎಂದು ಸ್ಥಳೀಯರು ಆಕ್ರೋಶಗೊಂಡಿದ್ದಾರೆ. ಈ ಎಲ್ಲಾ ವಿಷಯ ಕುರಿತು ನಮ್ಮಪ್ರತಿನಿಧಿ ಸುರೇಶ್ ಬಾಬು ನಡೆಸಿರುವ EXCLUSIVE Walkthrough ನಿಮಗಾಗಿ.
PublicNext
19/08/2022 11:58 am