ಮಾಜಿ ಗೃಹ ಸಚಿವ ಮತ್ತು ಮಾಜಿ ನಗರಾಭಿವೃದ್ಧಿ ಸಚಿವರಾದ ಕೆ.ಜೆ.ಜಾರ್ಜ್ ಪ್ರತಿನಿಧಿಸುವ ಕ್ಷೇತ್ರದ ವಾರ್ಡಿನ ದುಸ್ಥಿತಿ ಇದು..ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಎಚ್‌ಬಿಆರ್ ವಾರ್ಡ್ 24ರಲ್ಲಿ ಶ್ರೀ ಬೈರವೇಶ್ವರ ಲೇಔಟ್ ಇದೆ. ಹೆಬ್ಬಾಳ ಮಾರ್ಗವಾಗಿ ಕೃಷ್ಣರಾಜಪುರದತ್ತ ಸಂಚರಿಸುವ ಬೃಹತ್ ರಾಜಕಾಲುವೆಗೆ ಹೊಂದಿಕೊಂಡೆ ಲೇಔಟಿಗೆ ಕಳೆದ ರಾತ್ರಿ ಸುರಿದ ಭಾರಿ ಮಳೆಯ ರಾಜಕಾಲುವೆ ನೀರು ನುಗ್ಗಿ ಸಮಸ್ಯೆ ಆಗಿವೆ. ಬೃಹತ್ ರಾಜಕಾಲುವೆ ನೀರು ಹಿಮ್ಮುಖವಾಗಿ, ರಸ್ತೆ ಮತ್ತು ಮನೆಗಳಿಗೆ ನೀರು ನುಗ್ಗಿ ನೂರಾರು ಜನ ನಿದ್ರೆ ಇಲ್ಲದೇ ಪರಿತಪಿಸಿದ್ದಾರೆ.
ರಾತ್ರಿ ಭೈರವೇಶ್ವರ ಲೇಔಟಿನ ತಗ್ಗು ಪ್ರದೇಶಗಳಿಗೆ ಮಳೆ ನೀರು ಮತ್ತು ರಾಜಕಾಲುವೆ ಎರಡೂ ನೀರು ನುಗ್ಗಿವೆ. ಹೆಬ್ಬಾಳ ಮಾರ್ಗದ ಬೃಹತ್ ರಾಜಕಾಲುವೆ ರೈಲ್ವೆಸೇತುವೆ ಚಿಕ್ಕಜಾಗವೇ ಇಷ್ಟೆಲ್ಲಾ ಅವಾಂತರಕ್ಕೆ ಕಾರಣ. ಬೃಹತ್ ರಾಜಕಾಲುವೆಗೆ ಹೊಂದಿಕೊಂಡೆ ದಿವ್ಯಶ್ರೀ ಅಪಾರ್ಟ್ಮೆಂಟ್ ನವರು ಫ್ಲಾಟ್ಸ್ ನಿರ್ಮಿಸುತ್ತಿದ್ದಾರೆ. ಮುಖ್ಯ ಕಾಲುವೆಯ ಸಂಪರ್ಕ ಕಾಲುವೆನ ದಿವ್ಯಶ್ರೀ ಅಪಾರ್ಟ್ಮೆಂಟ್ನವರು ಮುಚ್ಚಿದ ಪರಿಣಾಮ, ಭೈರವೇಶ್ವರ ಲೇಔಟ್ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಭೈರವೇಶ್ವರ ಲೇಔಟಿನ ತಗ್ಗು ಪ್ರದೇಶದ 3ರಸ್ತೆಗಳ ಅರ್ಧಭಾಗ ಸಂಪೂರ್ಣ ಜಲಾವೃತವಾಗಿವೆ. ದಿವ್ಯಶ್ರೀ ಅಪಾರ್ಟ್ಮೆಂಟ್ ನವರಿಗೆ ರಾಜಕಾಲುವೆ ಮುಚ್ಚಲು ಅವಕಾಶ ಕೊಟ್ಟವರು ಯಾರು. ಇದು ಬಿಬಿಎಂಪಿ ಅಧಿಕಾರಿಗಳಿಗಾಗಿ ಕೆ.ಜೆ.ಜಾರ್ಜ್ ಗಮನಕ್ಕೆ ಬಂದಿಲ್ಲವೇ ಎನ್ನುವುದು ವಿಪರ್ಯಾಸ.
ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ಬೆಂಗಳೂರು
PublicNext
04/08/2022 11:17 am