ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಗರದಲ್ಲಿ ಇದ್ದೂ ಇಲ್ಲದಂತಾಗಿದೆ ಇ – ಶೌಚಾಲಯ

ವರದಿ - ಗೀತಾಂಜಲಿ

ಬೆಂಗಳೂರು: ಪ್ರತಿ ವರ್ಷ ಸ್ವಚ್ಛ ಭಾರತ ಸಮೀಕ್ಷೆ ಬಂದಾಗ ಪಾಲಿಕೆ ನಿದ್ದೆಯಿಂದ ಎದ್ದವರಂತೆ ಚುರುಕಾಗುತ್ತದೆ. ಸ್ವಚ್ಛತೆಗಾಗಿ ಹಲವು ಕೆಲಸ ಕಾರ್ಯಗಳನ್ನು ಸಮರೋಪಾದಿಯಲ್ಲಿ ಮಾಡುತ್ತದೆ. ಆದ್ರೆ ಈಗ ಇ – ಶೌಚಾಲಯ ನಿರ್ಮಿಸಿ ಯಾವ ಪ್ರಯೋಜನವೂ ಇಲ್ಲದಂತಿದೆ. ಕೆಲವು ಕಡೆ ಕೆಟ್ಟು ನಿಂತರೆ ಕೆಲವೆಡೆ ಸಾರ್ವಜನಿಕವಾಗಿ ಬಳಸಿಕೊಳ್ಳುತ್ತಿಲ್ಲ.

ತಂತ್ರಜ್ಞಾನ ಆಧಾರಿತ ಸ್ವಯಂಪ್ರೇರಿತವಾಗಿ ಸ್ವಚ್ಛ ಸಾಮರ್ಥ್ಯವಿರುವ ಇ-ಶೌಚಾಲಯವನ್ನು ಉಳಿಸಿಕೊಳ್ಳುವುದು ಬಿಬಿಎಂಪಿಗೆ ದೊಡ್ಡ ತಲೆನೋವಾಗಿದೆ. ಬಿಬಿಎಂಪಿ ಕಳೆದ ಎರಡು ವರ್ಷಗಳ ಹಿಂದೆ ಸಾರ್ವಜನಿಕರಿಗೆ ಉಪಯೋಗವಾಗ್ಲಿ ಅನ್ನುವ ಉದ್ದೇಶದಿಂದ ಮತ್ತು ಪರಿಸರಸ್ನೇಹಿ ಮತ್ತು ಸಾರ್ವಜನಿಕರ ತುರ್ತು ಅಗತ್ಯಕ್ಕೆ ಪೂರಕವಾಗಿ ನಿರ್ಮಿಸಲಾಗಿತ್ತು. ಎರಡು ಹಂತಗಳಲ್ಲಿ 169 ಕಡೆ ಈ ಶೌಚಾಲಯವನ್ನು ಪ್ರಾರಂಭಿಸಿತ್ತು. ಆದರೆ ಕೆಲವು ಕಡೆ ಇ-ಶೌಚಾಲಯ ಕೆಟ್ಟು ನಿಂತರೆ ಮತ್ತೆ ಕೆಲವೆಡೆ ಸಾರ್ವಜನಿಕವಾಗಿ ಬಳಸಿಕೊಳ್ಳುತ್ತಿಲ್ಲ ಅನ್ನುವ ಮಾತು ಇದೆ.

ಬಿಬಿಎಂಪಿ ಮೊದಲ ಹಂತದಲ್ಲಿ 87 ಮತ್ತು ಎರಡನೇ ಹಂತದಲ್ಲಿ 82 ಶೌಚಾಲಯವನ್ನು ನಿರ್ಮಿಸಿತ್ತು. ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುವುದು ಇ – ಶೌಚಾಲಯ ಪರಿಚಯಿಸಿದ ಮೇಲೆ ಕಡಿಮೆಯಾಗಲಿದೆ ಎಂದು ಭಾವಿಸಲಾಗಿತ್ತು. ಆದರೆ ಸಾರ್ವಜನಿಕರು ಈ ಶೌಚಾಲಯವನ್ನು ಬಳಸದೆ ಅದರ ಹಿಂದೆ ಹೋಗಿ ಮೂತ್ರವಿಸರ್ಜನೆ ಮಾಡುತ್ತಿರುವುದರಿಂದ ಮತ್ತಷ್ಟು ಅವಮಾನಕ್ಕೀಡಾಗಿದೆ.

ಬೆಂಗಳೂರು ನಗರಕ್ಕೆ ಇ – ಶೌಚಾಲಯಗಳ ಅವಶ್ಯಕತೆ ಇರಲಿಲ್ಲ. ಇರುವಂತಹ ಇ – ಶೌಚಾಲಯಗಳನ್ನು ಸಾರ್ವಜನಿಕರು ಬಳಸಿಕೊಳ್ಳುತ್ತಿಲ್ಲ. ಅಧಿಕಾರಿಗಳು ಹಣ ದೋಚುವ ನೆಪಕ್ಕೆ ಈ ರೀತಿ ನಿರ್ಮಾಣ ಮಾಡಿ ಕೈ ಬಿಟ್ಟಿದ್ದಾರೆ ಎಂದು ಸಾರ್ವಜನಿಕರು ಆರೋಪ ಮಾಡಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಅಧಿಕಾರಿಗಳು ಯಾವ ಕ್ರಮಕ್ಕೆ ಮುಂದಾಗುತ್ತಾರೆ ಅನ್ನೋದನ್ನ ಕಾದು ನೋಡಬೇಕಾಗಿದೆ.

Edited By :
PublicNext

PublicNext

29/07/2022 08:07 pm

Cinque Terre

41.34 K

Cinque Terre

0

ಸಂಬಂಧಿತ ಸುದ್ದಿ