ಬೆಂಗಳೂರು ಹೆಚ್ಚು (ಕು)ಪ್ರಸಿದ್ಧವಾಗಿರುವುದು ಟ್ರಾಫಿಕ್ ವಿಚಾರವಾಗಿ ಎಂದರೆ ತಪ್ಪಲ್ಲ. ಇಲ್ಲಿ ಕೇವಲ 15 ನಿಮಿಷದಲ್ಲಿ ತಲುಪುವ ಜಾಗವನ್ನು ಒಂದು ಗಂಟೆಯಲ್ಲಿ ತಲುಪುತ್ತೇವೆ. ಕೆಲವೊಂದು ಸ್ಥಳಗಳಲ್ಲಿ ಸಿಕ್ಕಿ ಹಾಕಿಕೊಂಡರೆ ಆ ದಿನ ಪೂರ್ತಿ ಅಲ್ಲಿಯೇ ಎನ್ನುವಂತೆ ಪರಿಸ್ಥಿತಿ ಇದೆ! ಆದರೆ, ಸದ್ಯ ಬೆಂಗಳೂರಿನಲ್ಲಿ ಅತಿ ಹೆಚ್ಚು ಸಂಚಾರ ದಟ್ಟಣೆಯಾಗುವ ಹೆಬ್ಬಾಳ ಮೇಲ್ಸೇತುವೆ ಅಗಲೀಕರಣಕ್ಕೆ ಪಾಲಿಕೆ ಮುಂದಾಗಿದೆ.
ಕಾರಣ ಸಂಚಾರ ದಟ್ಟಣೆ. ನಿತ್ಯ ಲಕ್ಷಾಂತರ ವಾಹನಗಳು ಈ ಮೇಲುಸೇತುವೆ ಮೇಲೆ ಸಾಗುತ್ತದೆ. ಹೀಗಾಗಿ ಹೆಬ್ಬಾಳ ಫ್ಲೈ ಓವರ್ ಬಳಿ ಟ್ರಾಫಿಕ್ ಪೊಲೀಸರು ಅಲರ್ಟ್ ಆಗಿದ್ದು, ಏರ್ ಪೋರ್ಟ್ ನಿಂದ ಬರೋ ಬಿಎಂಟಿಸಿ, ಕೆಎಸ್ಆರ್ ಟಿಸಿ ಬಸ್ ಗಳಿಗೆ ಮೈನ್ ರೋಡ್ ನಲ್ಲಿ ಪ್ರಯಾಣಿಕರನ್ನು ಇಳಿಸಲು ಮತ್ತು ಹತ್ತಿಸಿಕೊಳ್ಳಲು ಅವಕಾಶ ಕೊಡುತ್ತಿಲ್ಲ. ಈ ರೀತಿ ಮಾಡುವುದರಿಂದ ಟ್ರಾಫಿಕ್ ಹೆಚ್ಚಾಗುವ ಕಾರಣ ಹೊಸ ನಿರ್ಧಾರ ಮಾಡಿದ್ದು, ಸರ್ವಿಸ್ ರೋಡ್ ನಲ್ಲೇ ಬಸ್ ಗಳು ಸ್ಟಾಪ್ ಕೊಡಬೇಕು ಎಂದು ಹೇಳಲಾಗಿದೆ.
ಹೀಗಾಗಿ ಫ್ಲೈ ಓವರ್ ಅಗಲೀಕರಣಕ್ಕೆ ಸರ್ಕಾರ ಮುಂದಾಗಿದೆ. ಈ ಕುರಿತು ಬಿಬಿಎಂಪಿ ಚೀಫ್ ಕಮಿಷನರ್ ತುಷಾರ್ ಗಿರಿನಾಥ್ ಪ್ರಾಥಮಿಕ ಮಾಹಿತಿ ನೀಡಿದರು. ಇದರ ಜತೆಗೆ ಈದ್ಗಾ ಮೈದಾನ ವಿವಾದ ವಿಚಾರದಲ್ಲಿ ಆ ವಲಯದ ಜಂಟಿ ಆಯುಕ್ತರಿಗೆ ಪರಮ ಅಧಿಕಾರ ನೀಡಲಾಗಿದೆ ಎಂದು ತಿಳಿಸಿದರು.
PublicNext
14/07/2022 06:25 pm