ಬಿಬಿಎಂಪಿ ವ್ಯಾಪ್ತಿಯಲ್ಲಿ ನಕ್ಷೆ ಮಂಜೂರಾತಿ ಪಡೆದು ನಿರ್ಮಿಸುವ ಕಟ್ಟಡಗಳಿಗೆ ಪ್ರಾರಂಭಿಕ ಪ್ರಮಾಣ ಪತ್ರ ನೀಡುವ ಪದ್ದತಿಯನ್ನೇ ಕೈಬಿಡಲು ಚಿಂತನೆ ನಡೆಸಲಾಗಿದೆ. ಆ ಕುರಿತಾದ ವರದಿ ಇಲ್ಲಿದೆ.
ಲಂಗು ಲಗಾಮ್ ಇಲ್ಲದೆ ಕಟ್ಟಡ ನಿರ್ಮಿಸುವುದನ್ನು ತಡೆಯಲು ಪ್ರಾರಂಭಿಕ ಪ್ರಮಾಣ ಪತ್ರವನ್ನು ಜಾರಿಗೆ ತರಲಾಗಿತ್ತು.ಆದರೆ ಈ ನಿಯಮವನ್ನೇ ಸಡಿಲಗೊಳಿಸುವ ಪ್ರಯತ್ನ ನಡೆಯುತ್ತಿದೆ.
ನಗರದ ಹಲವು ಸಮಸ್ಯೆಗಳಿಗೆ ಸಂಬಂಧಿಸಿದಂತೆ 2022 ಏ. 8 ರಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಕ್ಷೆ ಮಂಜೂರಾತಿ ಪಡೆದ ಕಟ್ಟಡಗಳಿಗೆ ಸಿಸಿ ನೀಡುವ ವಿಚಾರ ಸುದೀರ್ಘವಾಗಿ ಚರ್ಚೆ ಆಗಿದೆ. ಅಧಿಕಾರಿಗಳಿಂದ ಪರ- ವಿರೋಧ ಚರ್ಚೆಯ ಬಳಿಕ ಸಿಸಿ ವಿತರಣೆ ಕೈ ಬಿಡಲು ನಿರ್ಧರಿಸಲಾಗಿದೆ. ಬಿಬಿಎಂಪಿ 2003 ರ 5.2 ಹಾಗು 5.3 ರ ಹಾಗೂ 2022 ಜ.13 ತಿದ್ದುಪಡಿ ಕಾಯ್ದೆಯಲ್ಲಿ ಶುಲ್ಕಗಳನ್ನು ವಿಧಿಸಲು ಕಲ್ಪಿಸಿರುವ ಅವಕಾಶಗಳ ಅನ್ವಯ ಬಿಬಿಎಂಪಿ ಕಟ್ಟಡಗಳಿಗೆ ಪ್ರಾರಂಭಿಕ ಪ್ರಮಾಣ ಪತ್ರ ನೀಡಲಾಗುತ್ತಿದೆ. ಈ ಬೈಲಾವೂ 2004 ರಿಂದ ಈವರೆಗೆ ಜಾರಿಯಲ್ಲಿ ಇದೆ.ಆದರೆ ಇದೀಗ ಆದೇಶವನ್ನು ಗಾಳಿಗೆ ತೂರಲಾಗಿದ್ದು, ಸಿಸಿ ವಿತರಣೆ ಕೈಬಿಡಲು ಸರ್ಕಾರ ಚಿಂತನೆ ನಡೆಸಿದೆ.
ಇನ್ನೂ ಅಕ್ರಮ ಕಟ್ಟಡಗಳಿಗೆ ಇದು ರಹದಾರಿ ಆಗಲಿದೆ. 12 ಲಕ್ಷ ಅಧಿಕ ಸಿಸಿ ಒಸಿ ನಕಲಿ ಮಾಡಿಸಿಕೊಂಡ ಪ್ರಕರಣಗಳು ಈಗಾಗಲೇ ಕಣ್ಮುಂದೆ ಇದೆ. ಆದರೆ ಸರ್ಕಾರ ಮತ್ತೆ ಭೂ ಗಳ್ಳರ ಪರ ನಿಲ್ಲಲು ಹೊರಟಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಗಣೇಶ್ ಹೆಗಡೆ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು
PublicNext
07/07/2022 08:37 pm