ಟಿ. ಚೌಡಯ್ಯ ರಸ್ತೆಗೆ ಹೊಂದಿಕೊಂಡಿರುವ ಮಲ್ಲೇಶ್ವರಂ 18 ಅಡ್ಡ ರಸ್ತೆಯಿಂದ ಸಿ ಎನ್ ಆರ್ ರಾವ್ ಕೆಳ ಸೇತುವೆ ವರೆಗೆ ಎಡಬದಿಯಲ್ಲಿ ಇಂದಿನಿಂದ ( ಜೂನ್. 6) ವೈಟ್ ಟಾಪಿಂಗ್ ಕಾಮಗಾರಿ ಆರಂಭವಾಗಲಿದೆ.
ಈ ಮಾರ್ಗದಲ್ಲಿ ವಾಹನ ಸಂಚಾರ ನಿರ್ಬಂಧ ಹೇರಲಾಗಿದೆ. ಬಿಬಿಎಂಪಿ ವತಿಯಿಂದ ಕಾಮಗಾರಿ ನಡೆಯುತ್ತಿದ್ದು ವಾಹನ ಸವಾರರ ಸಹಕರಿಸಬೇಕೆಂದು ಪೊಲೀಸರು ಕೋರಿದ್ದಾರೆ. ಮೇಖ್ರಿ ಸರ್ಕಲ್ ಸರ್ವಿಸ್ ರಸ್ತೆ ಹಾಗೂ ಸದಾಶಿವ ನಗರ ಪೊಲೀಸ್ ಠಾಣೆ ಮೂಲಕವು ಸಂಚಾರ ಮಾಡಬಹುದು.
ಬಳ್ಳಾರಿ ರಸ್ತೆಯ ಕಾವೇರಿ ಜಂಕ್ಷನ್ ನಿಂದ ಯಶವಂತಪುರ ಕಡೆ ಹೋಗುವ ವಾಹನಗಳು ಮಲ್ಲೇಶ್ವರಂ 18 ಕ್ರಾಸ್ ನಲ್ಲಿ ಎಡತಿರುವು ಪಡೆದು ಸಂಪಿಗೆ ರಸ್ತೆ ಜಂಕ್ಷನ್, ಮಾರ್ಗೋಸೋ ರಸ್ತೆ, ಹಾಗೂ ಮಲ್ಲೇಶ್ವರಂ 8 ನೇ ಮುಖ್ಯ ರಸ್ತೆಯ ಮೂಲಕ ಹೋಗಬಹುದು.
Kshetra Samachara
06/06/2022 03:27 pm