ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಜಯನಗರದ ರಾಘವೇಂದ್ರ ಮಠಕ್ಕೆ ಸಿಎಂ ಭೇಟಿ : ಮಂತ್ರಾಲಯದಲ್ಲಿ ಅನ್ನಛತ್ರ ನಿರ್ಮಾಣಕ್ಕೆ 5 ಕೋಟಿ ಕೊಡುಗೆ

ಸಿಎಂ ಬಸವರಾಜ ಬೊಮ್ಮಾಯಿ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ತಕ್ಷಣ ಜಯನಗರದಲ್ಲಿರುವ ಮಂತ್ರಾಲಯ ರಾಘವೇಂದ್ರ ಮಠಕ್ಕೆ ಭೇಟಿ ಕೊಟ್ಟಿದ್ದಾರೆ. ಗುರುರಾಯರ ವೃಂದಾವನ ದರ್ಶನ ಪಡೆದು ಮಂತ್ರಾಲಯ ಮಠಾಧೀಶ ಶ್ರಿ ಸುಬುದೇಂದ್ರ ತೀರ್ಥ ಸ್ವಾಮೀಜಿಯವರ ಆಶೀರ್ವಾದ ಪಡೆದರು. ಇದೇ ಸಂದರ್ಭದಲ್ಲಿ ಆಂಧ್ರಪ್ರದೇಶದಲ್ಲಿರುವ ಮಂತ್ರಾಲಯ ಮಠದಲ್ಲಿ ಕರ್ನಾಟಕದ ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅನ್ನಛತ್ರಕ್ಕಾಗಿ 5 ಕೋಟಿ ಹಣ ನೀಡುವುದಾಗಿ ಘೋಷಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಸುಬುದೇಂದ್ರ ತೀರ್ಥ ಸ್ವಾಮೀಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಂತ್ರಾಲಯಕ್ಕೆ ಭೇಟಿಕೊಡುವ ಕಾರ್ಯಕ್ರಮವಿತ್ತು. ಆದರೆ ಕಾರ್ಯಬಾಹುಳ್ಯದ ನಡುವೆ ಅದು ಸಾಧ್ಯವಾಗಿರಲಿಲ್ಲ. ಈ ಹಿಂದೆ ಅವರು ಗೃಹ ಸಚಿವರಾಗಿದ್ದಾಗಲೂ ಅನೇಕ ಸಲ ಶ್ರೀ ಮಠಕ್ಕೆ ಆಗಮಿಸಿದ್ದರು. ಈಗಲೂ ಮಠಕ್ಕೆ ಬಂದು ರಾಜ್ಯದ ಅಭಿವೃದ್ಧಿ ಶಾಂತಿ ಸೌಹಾರ್ದತೆ ಕಾಪಾಡುವ ವಿಚಾರಗಳಿಗೆ ಸಂಬಂಧಿಸಿದಂತೆ ಮಾತುಕತೆ ನಡೆಸಿದ್ದಾರೆ ಎಂದು ಹೇಳಿದರು. ಮಂತ್ರಾಲಯ ಮಠಕ್ಕೆ ಕರ್ನಾಟಕ ರಾಜ್ಯದ ಭಕ್ತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಅನ್ನಛತ್ರಕ್ಕಾಗಿ 5 ಕೋಟಿ ನೀಡುವುದಾಗಿ ಸ್ವ ಇಚ್ಛೆಯಿಂದ ಘೋಷಿಸಿರುವುದಾಗಿ ತಿಳಿಸಿದರು. ಈ ವೇಳೆ ಕಂದಾಯ ಸಚಿವ ಆರ್ ಅಶೋಕ್ ಉಪಸ್ಥಿತರಿದ್ದರು.

Edited By :
PublicNext

PublicNext

07/04/2022 06:55 pm

Cinque Terre

37.97 K

Cinque Terre

1

ಸಂಬಂಧಿತ ಸುದ್ದಿ