ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರ ಬೆಂಗಳೂರು ಮಹಾನಗರಕ್ಕೆ ಹೊಂದಿಕೊಂಡಿದ್ದರೂ ಜನಪ್ರತಿನಿಧಿಗಳು ಮತ್ತು ಸರ್ಕಾರದ ನಿರ್ಲಕ್ಷ್ಯಕ್ಕೆ ಪ್ರತಿತಿಂಗಳು ಸರಾಸರಿ 4ರಿಂದ 5 ಜನ ಸಾಯ್ತಿದ್ದಾರೆ! 2018ರಲ್ಲೇ ಹೊಸಕೋಟೆಗೆ ಸಂಚಾರಿ ಪೊಲೀಸ್ ಠಾಣೆ ಘೋಷಣೆ ಮಾಡಿದ್ದರೂ ಇನ್ನು ಸಿಬ್ಬಂದಿ ನಿಯೋಜಿಸದ ಕಾರಣ ಟ್ರಾಫಿಕ್ ಜಾಮ್ ನಿಂದ ಜನ ಹೈರಾಣಾಗಿದ್ದಾರೆ.
ಹೊಸಕೋಟೆ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಗೆ 6 Law & Order ಠಾಣೆ ಬರ್ತವೆ. ಹೊಸಕೋಟೆ, ಸೂಲಿಬೆಲೆ ನಂದಗುಡಿ, ತಿರುಮಶೆಟ್ಟಿಹಳ್ಳಿ, ಅನುಗೊಂಡನಹಳ್ಳಿ & ಆವಲಹಳ್ಳಿಗಳು. ಬೆಂಗಳೂರು & ಕೋಲಾರ ರಾ.ಹೆ. ದಾಬಸ್ ಪೇಟೆ & ಸರ್ಜಾಪುರ ರಾಜ್ಯ ಹೆದ್ದಾರಿ, ಹೊಸಕೋಟೆ & ಚಿಂತಾಮಣಿ ರಾಜ್ಯ ಹೆದ್ದಾರಿಗಳಲ್ಲಿ ಪ್ರತಿದಿನ ನಾಲ್ವರು ಸಾಯುತ್ತಿದ್ದಾರೆ. ಈ ಬಗ್ಗೆ ನಗರಸಭೆಯಾಗಲಿ, ಜನಪ್ರತಿನಿಧಿಗಳಾಗಲಿ ತಲೆಕೆಡಿಸಿಕೊಳ್ತಿಲ್ಲ.
ಹೊಸಕೋಟೆ ಟ್ರಾಫಿಕ್ ಸ್ಟೇಷನ್ ಗೆ 94 ಸಿಬ್ಬಂದಿ ಅಗತ್ಯವಿದೆ. P.I, 4 PSI, 6 ASI, 18 H.C., 36 PC ಸೇರಿ 94 ಜನ ಬೇಕಾಗಿದೆ. ಆದರೆ ಇರೋದು ಇಬ್ಬರು ASI, 9 ಹೆಡ್ ಕಾನ್ ಸ್ಟೇಬಲ್, 10 ಕಾನ್ ಸ್ಟೇಬಲ್ ಮಾತ್ರ. ಭೀಕರ ಅಪಘಾತಗಳು ವರ್ಷದಿಂದ ವರ್ಷಕ್ಕೆ ಹೆಚ್ಚಿ ಜನ ಸಾಯುತ್ತಿದ್ದಾರೆ. 2019ರಲ್ಲಿ 147 ಭೀಕರ ಅಪಘಾತಗಳಾಗಿದ್ದರೆ, 2020ರಲ್ಲಿ 122 ಅಪಘಾತ, 2021ರಲ್ಲಿ 94 ಅಪಘಾತಗಳಾಗಿ ಅಷ್ಟೇ ಪ್ರಮಾಣದ ಸಾವು ಸಂಭವಿಸಿದೆ.
ಶರತ್ ಬಚ್ಚೇಗೌಡ ಹೊಸಕೋಟೆ ಹಾಲಿ ಶಾಸಕ. ಇನ್ನು MTB ನಾಗರಾಜ್ ಸಣ್ಣಕೈಗಾರಿಕೆ ಮತ್ತು ಪೌರಾಡಳಿತ ಸಚಿವರಾಗಿದ್ದರೂ ಟ್ರಾಫಿಕ್ ಸಮಸ್ಯೆ ಮಾತ್ರ ಬಗೆಹರಿಯುತ್ತಿಲ್ಲ.
PublicNext
31/03/2022 12:29 pm