ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಥೀಮ್ ಪಾರ್ಕ್ ವಿಶಿಷ್ಟ ಅಭಿಯಾನಕ್ಕೆ ಸಿಎಂ ಚಾಲನೆ

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಾಣ ಆಗಿರುವ ಕಂಚಿನ ಪ್ರತಿಮೆ & ಥೀಮ್ ಪಾರ್ಕ್ ಉದ್ಘಾಟನಾ ಅಭಿಯಾನಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಚಾಲನೆ ನೀಡಿದ್ದಾರೆ. 20 ಕೋಟಿ ವೆಚ್ಚದಲ್ಲಿ ಥೀಮ್ ಪಾರ್ಕ್ ನಿರ್ಮಾಣಕ್ಕೆ ಶಂಕು ಸ್ಥಾಪನೆ ಸಹ ನೆರವೇರಿಸಲಾಯ್ತು.

ಈಗಾಗಲೆ 64 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಿರುವ 108 ಅಡಿ ಎತ್ತರದ ಪ್ರತಿಮೆ ಇದಾಗಿದೆ. 98.ಕೆ.ಜಿ ಕಂಚು, 120ಕೆ.ಜಿ ಸ್ಟೀಲ್ ಬಳಸಿ ಕೆಂಪೇಗೌಡ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದೆ. ಪ್ರತಿಮೆ ಮುಂಭಾಗದ ಥೀಮ್ ಪಾರ್ಕ್ ಗೆ ರಾಜ್ಯದ ಪ್ರತಿ ಹಳ್ಳಿಯಿಂದ ಪವಿತ್ರ ಮಣ್ಣು ಮತ್ತು ಕೆರೆ ನೀರು ಸಂಗ್ರಹ ಮಾಡಿ ತಂದು ನಿರ್ಮಿಸಲಾಗುವುದು. ರಾಜ್ಯಾದ್ಯಂತ 45 ದಿನಗಳ ಕಾಲ ಕೆಂಪೇಗೌಡರ ರಥ ಸಂಚರಿಸಲಿದೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಆಗಮನ ದ್ವಾರದ ಬಳಿ ಕೆಂಪೇಗೌಡರ ಪ್ರಗತಿ ಪ್ರತಿಮೆ ನಿರ್ಮಾಣ ಆಗಿದ್ದು, ಕೆಲವೇ ದಿನಗಳಲ್ಲಿ ಲೋಕಾರ್ಪಣೆ ಆಗಲಿದೆ. ಸಿ.ಎಂ.ರವರಿಗೆ ಸಚಿವ ಅಶ್ವಥ ನಾರಾಯಣ, ಗೋಪಾಲಯ್ಯ, ಆರ್. ಅಶೋಕ್, ವಿಶ್ವನಾಥ್, ಸಂಸದ ಪಿಸಿ ಮೋಹನ್, ದೇವನಹಳ್ಳಿ ನಿಸರ್ಗ ನಾರಾಯಣ ಸ್ವಾಮಿ ಸಾಥ್ ನೀಡಿದರು..

ಸುರೇಶ್ ಬಾಬು, ಪಬ್ಲಿಕ್ ನೆಕ್ಸ್ಟ್, ದೇವನಹಳ್ಳಿ

Edited By :
PublicNext

PublicNext

01/09/2022 01:39 pm

Cinque Terre

19.76 K

Cinque Terre

0

ಸಂಬಂಧಿತ ಸುದ್ದಿ