ಬೆಂಗಳೂರು: ಉಲ್ಲಾಳದ ಸಮೀಪ ಕಾವೇರಿ ಐದನೇ ಹಂತದ ಪೈಪ್ ಲೈನ್ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ನಿನ್ನೆ ಮೂವರು ಕಾರ್ಮಿಕರು ಕೆಲಸ ಮಾಡುತ್ತಿದ್ದರು.ಆದರೆ, ಬೆಂಗಳೂರಲ್ಲಿ ಸುರಿದ ಭಾರೀ ಮಳೆಗೆ ಕೆಲಸ ಮಾಡುತ್ತಿದ್ದ ಮೂವರು ಕಾರ್ಮಿಕರಲ್ಲಿ ಕೊಚ್ಚಿ ಹೋಗಿ ಇಬ್ಬರು ಮೃತಪಟ್ಟಿದ್ದಾರೆ. ಒಬ್ಬನ ರಕ್ಷಣೆ ಆಗಿದೆ. ಈ ಬಗ್ಗೆ ಈ ಯೋಜನೆಯ ಇಂಜಿನಿಯರ್ ರಮೇಶ್ ಏನ್ ಹೇಳಿದ್ದಾರೆ ಗೊತ್ತೇ ? ಬನ್ನಿ, ನೋಡೋಣ.
ಕಾವೇರಿ ಐದನೇ ಹಂತದ ಈ ಕಾಮಗಾರಿ 480 ಕೋಟಿ ಪ್ರಾಜೆಕ್ಟ್ ಆಗಿದೆ. ಇದನ್ನ ಹೈದರಾಬಾದ್ ಮೂಲದ ಮೇಘಾ ಇಂಜಿನಿಯರಿಂಗ್ ಸಂಸ್ಥೆಗೆ ಗುತ್ತಿಗೆ ಕೊಡಲಾಗಿತ್ತು. ಈ ಕಾಮಗಾರಿಯಲ್ಲಿ ಕೇವಲ ಪೈಪ್ ಗೆ ಹೋಲ್ ಮಾಡೋ ಕೆಲಸ ಮಾತ್ರ ಇತ್ತು. ಅದಕ್ಕೇನೆ ಮೂವರು ಕೆಲಸ ಮಾಡುತ್ತಿದ್ದರು.
ಈ ಘಟನೆಯಲ್ಲಿ ಒಬ್ಬ ಬಚಾವ್ ಆಗಿದ್ದಾನೆ. ಆಕಷ್ಮಿಕವಾಗಿಯೇ ಈ ದುರ್ಘಟನೆ ಆಗಿದೆ. ಇದರಲ್ಲಿ ಇಬ್ಬರು ಮೃತಟ್ಟಿದ್ದಾರೆ. ಮೃತರ ಕುಟುಂಬಕ್ಕೆ ಪರಿಹಾರ ನೀಡೋ ಕೆಲಸವನ್ನ ಗುತ್ತಿಗೆದಾರ ಕಂಪನಿಯಿಂದ ಮಾಡಲಾಗುವುದು. ಘಟನೆ ಬಗ್ಗೆ ಸೂಕ್ತ ತನಿಖೆಯಾಗಲಿ, ಹಾಗೇನೆ ಕಾಮಗಾರಿಗೆ ಸಂಬಂಧಿಸಿದಂತೆ ಸೂಕ್ತ ಮುಂಜಾಗೃತೆ ಕಮ್ರಗಳನ್ನು ತೆಗೆದುಕೊಂಡಿದ್ದ ಅಂತಲೂ ಯೋಜನೆಯ ಇಂಜಿನಿಯರ್ ರಮೇಶ್ ಹೇಳಿದ್ದಾರೆ.
ಇದೇ ವೇಳೆ ಸ್ಥಳೀಯರು ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು.ಕೆರೆ ಪಕ್ಕವೇ ಗುಂಡಿ ಅಗೆದಿದ್ದಾರೆ. ಇದರಿಂದ ಓಡಾಡೋದು ಹೇಗೆ ? ಈ ಬಗ್ಗೆ ಸಾಕಷ್ಟು ಭಾರಿ ಇಂಜಿನಿಯರ್ ಗೆ ದೂರು ಕೊಟ್ಟಿದ್ದೇವೆ. ಆದರೆ, ಏನೂ ಪ್ರಯೋಜನವೇ ಇಲ್ಲ ಅಂತಲೇ ಮುಖ್ಯ ಇಂಜಿನಿಯರ್‌ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
PublicNext
18/05/2022 12:36 pm