ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಲಹಂಕ: ರಸ್ತೆ ಗುಂಡಿಗೆ ಬಿದ್ದು ಅಶ್ವಿನ್ ಸಾವಿಗೀಡಾದ ಹಿನ್ನೆಲೆ: ಗುಂಡಿ ಮುಚ್ಚುವ ಕೆಲಸ ಶುರು ಮಾಡಿದ ಬಿಬಿಎಂಪಿ

ಯಲಹಂಕ: ಯಲಹಂಕದ ಅಟ್ಟೂರು ವಾರ್ಡ್ ಸಾಯಿನಗರ 6ನೇ ಕ್ರಾಸ್ ಬಳಿ ಅಶ್ವಿನ್ ಎಂಬ ಯುವಕ ರಸ್ತೆ ಗುಂಡಿಗೆ ಬಲಿಯಾಗಿದ್ದ. ನಿನ್ನೆ ರಾತ್ರಿ 10ಗಂಟೆಗೆ ಜಲಮಂಡಳಿ ಗುಂಡಿಗೆ ಬಿದ್ದು ಗಾಯಗೊಂಡಿದ್ದ ಅಶ್ವಿನ್ ನನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿತ್ತು. ದುರದೃಷ್ಟವಶಾತ್ ಅಶ್ವಿನ್ ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದ.

ಇದೀಗ ಎಚ್ಚೆತ್ತುಕೊಂಡ ಯಲಹಂಕ ಬಿಬಿಎಂಪಿ ವಲಯದ ಅಧಿಕಾರಿ, ಇಂಜಿನಿಯರ್ ಗಳು ಸ್ಥಳಕ್ಕೆ ಆಗಮಿಸಿ ರಸ್ತೆ ಗುಂಡಿ ಮುಚ್ಚಿ ಡಾಂಬರು ಹಾಕಿದ್ದಾರೆ. ಇದೇ ವೇಳೆ AAP ಪಕ್ಷದ ಕಾರ್ಯಕರ್ತರು ಸಹ ಗುಂಡಿ ಸ್ಥಳಕ್ಕೆ ಆಗಮಿಸಿ ಪ್ರತಿಭಟನೆಗೆ ಮುಂದಾದರು. ವಿದ್ಯಾರಣ್ಯಪುರ ಪೊಲೀಸರು ಇಲ್ಲಿ ಪ್ರತಿಭಟನೆ ಮಾಡುವುದು ಬೇಡ, ಬೇಕಿದ್ದರೆ ಬಿಬಿಎಂಪಿ ಕಚೇರಿ ಬಳಿ ಪ್ರತಿಭಟನೆ ಮಾಡಿ ಎಂದು ಮನವೊಲಿಸಿದರು. ಇದಕ್ಕೆ ಬಗ್ಗದ AAP ಕಾರ್ಯಕರ್ತರು BBMP ಜಂಟಿ ಆಯುಕ್ತರು ಘಟನಾ ಸ್ಥಳಕ್ಕೆ ಬರಬೇಕೆಂದು ಆಗ್ರಹಿಸಿ ಪ್ರತಿಭಟಿಸಿ ಘೋಷಣೆ ಕೂಗಿದರು. ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ವಶಕ್ಕೆ ಪಡೆದರು..

ಸುರೇಶ್ ಬಾಬು. ಪಬ್ಲಿಕ್ ನೆಕ್ಸ್ಟ್, ಬೆಂಗಳೂರು.

Edited By : Nagesh Gaonkar
PublicNext

PublicNext

14/03/2022 04:41 pm

Cinque Terre

30.51 K

Cinque Terre

0

ಸಂಬಂಧಿತ ಸುದ್ದಿ