ದೊಡ್ಡಬಳ್ಳಾಪುರ: ಇದು 9 ಜನರ ಕುಟುಂಬ.ಇದರಲ್ಲಿ ನಾಲ್ವರು ಕುಳ್ಳರು. ಇವರು ಕೆಲಸಕ್ಕೆ ಹೋದ್ರೆ ಕೆಲಸ ಕೋಡೊದಿಲ್ಲ. ಶಾಲೆಗೆ ಹೋದ್ರೆ ಹೀಯಾಳಿಕೆ ಬೇರೆ. ಸ್ನೇಹಿತರ ಚುಚ್ಚು ಮಾತುಗಳಿಂದ ಝರ್ಜರಿತರಾದ ಈ ಕುಬ್ಜರು, ಶಾಲೆಯನ್ನ ಬಿಟ್ಟಿದ್ದಾರೆ.ಆದರೆ, ಈ ಇಡೀ ಕುಟುಂಬ ಸಾಕುವ ಹೊಣೆ ಅಕ್ಕನ ಮೇಲಿದೆ.
ಇದು ತಾಲೂಕಿನ ಕನಕೇನಹಳ್ಳಿಯ ಕಾಲೋನಿಯ ಕುಳ್ಳರ ಕುಟುಂಬದ ಕಣ್ಣೀರಿ ಕಥೆ. ಪರಿಶಿಷ್ಟ ಜಾತಿಗೆ ಸೇರಿದ ಮುತ್ತರಾಯಪ್ಪ ಮತ್ತು ಹನುಮಕ್ಕ ದಂಪತಿಗೆ 7 ಮಕ್ಕಳು. ಇವರಲ್ಲಿ ನಾಲ್ವರು ಕುಳ್ಳರು. ದೇಹ ಬೆಳವಣಿಗೆಯಾಗದೆ ಎರಡರಿಂದ ಮೂರಡಿ ಎತ್ತರದ ವ್ಯಕ್ತಿಗಳಿವರಾಗಿದ್ದಾರೆ. ಅಪ್ಪ- ಅಮ್ಮನಿಗೆ ಈಗಾಗಲೇ ವಯಸ್ಸಾಗಿದೆ. ದುಡಿಯುವ ಸ್ಥಿತಿಯಲಿಲ್ಲ. ಇಡೀ ಕುಟುಂಬವನ್ನು ಸಾಕುವ ಹೊಣೆ ಅಕ್ಕ ಬೈಲಮ್ಮನ ಹೆಗಲಿಗೆ ಬಿದ್ದಿದೆ. ಆದರೆ ಆಕೆಯು ಬಿದ್ದು ಕೈ ಮುರಿದುಕೊಂಡಿದ್ದಾರೆ. ಇದರಿಂದ ಈ ಬಡ ಕುಟುಂಬದ ನಿರ್ವಹಣೆ ಕಷ್ಟವಾಗಿದೆ.
36 ವರ್ಷದ ಪೂಜಮ್ಮ, 23 ವರ್ಷದ ಮುತ್ತಮ್ಮ, 26 ವರ್ಷದ ನರಸಮ್ಮ, 18 ವರ್ಷದ ಅಂಜನಮೂರ್ತಿಗೆ ದೇಹ ಬೆಳವಣಿಗೆ ಇಲ್ಲದೆ ಕುಜ್ಜವಾಗಿಯೇ ಇದ್ದಾರೆ. ಪೂಜಮ್ಮ ಕಾಲೇಜ್ ಮೆಟ್ಟಿಲು ತುಳಿದಿದ್ದು ಪಿಯುಸಿ ವ್ಯಾಸಂಗ ಮಾಡಿದ್ದಾರೆ. ಕುಟುಂಬ ನಿರ್ವಹಣೆಗಾಗಿ ಗಾರ್ಮೆಂಟ್ಸ್ ನಲ್ಲಿ ಕೆಲಸಕ್ಕೆಂದು ಹೋದಾಗ ನಿಮ್ಮ ಕೈಯಲ್ಲಿ ಈ ಕೆಲಸ ಮಾಡಲು ಸಾಧ್ಯವಿಲ್ಲವೆಂದು ಹೇಳಿ ವಾಪಸ್ ಕಳಿಸಿದ್ದಾರೆ. ಗ್ರಾಮದಲ್ಲಿ ಸಣ್ಣಪುಟ್ಟ ಕೂಲಿ ಕೆಲಸ ಮಾಡ್ಕೊಂಡ್ ಕುಟುಂಬಕ್ಕೆ ಆಧಾರವಾಗಿದ್ದಾರೆ ಪೂಜಮ್ಮ.
ಮುತ್ತಮ್ಮ ಗ್ರಾಮದಲ್ಲಿನ ಶಾಲೆಯಲ್ಲಿ 7 ನೇ ತರಗತಿವರೆಗೂ ವಿದ್ಯಾಭ್ಯಾಸ ಮಾಡಿದ್ದಾರೆ. ಹೈಸ್ಕೂಲ್ ಓದಲು ಪಕ್ಕದೂರಿಗೆ ಹೋಗ ಬೇಕು. ಪಕ್ಕದೂರಿಗೆ ಹೋಗ ಬೇಕಾದ್ರೆ ಬಸ್ ನಲ್ಲೇ ಹೋಗ ಬೇಕು. ಬಸ್ ನ ಮೆಟ್ಟಿಲು ಹತ್ತಲು ಸಾಧ್ಯವಾಗದೆ ಆಕೆ ಶಾಲೆಗೆ ಹೋಗುವುದನ್ನೆ ಬಿಟ್ಟಿದ್ದಾರೆ. ಇದರ ಜೊತೆಗೆ ಸ್ನೇಹಿತರ ನಿಂದನೆಯ ಮಾತುಗಳು ಸಹ ಶಾಲೆಗೆ ಹೋಗುವ ಉತ್ಸಾಹವನ್ನ ಕಿತ್ತುಕೊಂಡಿದೆ.
ವಿಶೇಷ ಚೇತನರ ವರ್ಗಕ್ಕೆ ಸೇರುವ ಇವರಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯ ಸಹ ಸಿಕ್ಕಿಲ್ಲ. ಕುಶಲ ಕಲೆಗಳ ತರಬೇತಿಯನ್ನ ನೀಡಿದ್ದಾರೆ. ಸ್ವಾವಲಂಬನೆಯ ಬದುಕನ್ನ ಕಟ್ಟಿಕೊಳ್ಳಬಲ್ಲರು. ಈ ಬಗ್ಗೆ ವಿಶೇಷ ಚೇತನರ ಸಬಲೀಕರಣ ಇಲಾಖೆ ಮುಂದಾಗ ಬೇಕಿದೆ.
PublicNext
16/05/2022 11:18 am