ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅಪಾರ್ಟ್‌ಮೆಂಟ್‌ನಲ್ಲಿ ಮೂಲಭೂತ ಸೌಕರ್ಯಗಳ ಕೊರತೆ, ಪ್ರತಿಭಟನೆ

ವರದಿ-ಬಲರಾಮ್ ವಿ

ಬೆಂಗಳೂರು: ನೀವು ನಿಮ್ಮ ಕನಸಿನ ಮನೆ ತೆಗೆದುಕೊಳ್ಳುವ ಮುಂಚೆ ಅಲ್ಲಿನ ವ್ಯವಸ್ಥೆಯ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ, ಯಾಕೆಂದರೆ ಮೋಸ ಮಾಡೋರು ಎಲ್ಲೆಂದರೆಲ್ಲಿ ಇರ್ತಾರೆ.

ಈ ಫೋಟೋದಲ್ಲಿ ಕಾಣುತ್ತಿರುವ ವ್ಯಕ್ತಿಯ ಹೆಸರು ವೆಂಕಟರೆಡ್ಡಿ. ಈತ ವೃತ್ತಿಯಲ್ಲಿ ಬಿಲ್ಡರ್. ಈತನನ್ನು ನಂಬಿದ ನೂರಾರು ಜನ ತಮ್ಮ ಕನಸಿನ ಮನೆ ಗಳನ್ನು ತೆಗೆದುಕೊಂಡಿದ್ದಾರೆ. ಆದರೆ ಈತ ಜನರ ಒಳ್ಳೆಯತನವನ್ನೇ ಉಪಯೋಗಿಸಿಕೊಂಡು ನಿವಾಸಿಗಳನ್ನು ವಂಚಿಸಿದ್ದಾನೆಂದು ಅಪಾರ್ಟ್ಮೆಂಟ್ ನಿವಾಸಿಗಳು ನ್ಯಾಯ ಕೊಡಿಸುವಂತೆ ಪ್ರತಿಭಟನೆಗೆ ಇಳಿದಿದ್ದಾರೆ.

ಮಹದೇವಪುರ ಕ್ಷೇತ್ರದ ಕಿತಗನೂರು ಗ್ರಾಮದಲ್ಲಿರುವ ವೆಂಕಟ್ ವಿಂಡ್ಸರ್ ಈಸ್ಟ್ ಅಪಾರ್ಟ್ ಮೆಂಟ್ ನಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಅಲ್ಲಿನ ನಿವಾಸಿಗಳು ಪರದಾಡುವಂತಾಗಿದ್ದು, ಅಲ್ಲಿನ ನಿವಾಸಿಗಳ ಗೋಳು ಕೇಳಲು ಯಾರೂ ಮುಂದೆ ಬರುತ್ತಿಲ್ಲ ಎಂದು ಈ ಅಪಾರ್ಟ್ ಮೆಂಟ್ ಬಿಲ್ಡರ್ ವೆಂಕಟ ರೆಡ್ಡಿ ವಿರುದ್ಧ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು..

ನಿವೇಶನ ಕೊಳ್ಳುವ ಮೊದಲು ಮೂಲಭೂತ ಸೌಕರ್ಯಗಳನ್ನ ಒದಗಿಸುವುದಾಗಿ ತಿಳಿಸಿ, ಸಂಪೂರ್ಣ ಹಣ ಪಡೆದು ಈಗ ಯಾವುದೇ ಸೌಕರ್ಯಗಳನ್ನು ಒದಗಿಸದೇ ವಂಚಿಸುತ್ತಿದ್ದಾರೆ ಎಂದು ನಿವಾಸಿ ವಿನಯ್ ಆಕ್ರೋಶ ಹೊರಹಾಕಿದ್ದಾರೆ.

Edited By : Shivu K
PublicNext

PublicNext

06/08/2022 09:56 pm

Cinque Terre

46.01 K

Cinque Terre

1

ಸಂಬಂಧಿತ ಸುದ್ದಿ