ದೊಡ್ಡಬಳ್ಳಾಪುರ: 16 ವರ್ಷಗಳಿಂದ ವಾಸವಾಗಿರುವ ಆಶ್ರಯ ಮನೆ ಅವರದ್ದಲ್ಲ. ಮನೆ ಖಾಲಿ ಮಾಡಿ ಎಂದು ಅಸಲಿ ಮನೆ ಮಾಲೀಕನ ದಬ್ಬಾಳಿಕೆ, ನಿವೇಶನವಾದರೂ ಕೊಡಿ, ಅಲ್ಲಿ ಗುಡಿಸಲಾದ್ರೂ ಹಾಕ್ಕೊಂಡು ಮನೆ ಖಾಲಿ ಮಾಡುವುದಾಗಿ ಬಡಪಾಯಿಗಳು ಕಣ್ಣೀರು ಹಾಕುತ್ತಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕು ಕಸಬಾ ಹೋಬಳಿ ಮಾದಗೊಂಡನಹಳ್ಳಿಯಲ್ಲಿ ನಿವೇಶನ ರಹಿತರಿಗೆ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದಿಂದ 494 ಮನೆಗಳನ್ನು ಕೊಡಲಾಗಿದೆ. ಕೂಲಿ ಕಾರ್ಮಿಕರು, ಗಾರ್ಮೆಂಟ್ಸ್ ಕೆಲಸಗಾರರು ಮತ್ತು ಸಣ್ಣಪುಟ್ಟ ಕೆಲಸ ಮಾಡುವವರು ಅಲ್ಲಿ ವಾಸವಾಗಿದ್ದಾರೆ. 16 ವರ್ಷಗಳಿಂದ ಕೆಲ ಮೂಲ ಸೌಕರ್ಯಗಳ ಕೊರತೆ ಹೊರತಾಗಿಯೂ ಮನೆ ಇದೆಯೆಂಬ ನೆಮ್ಮದಿಯ ಜೀವನ ನಡೆಸುತ್ತಿದ್ದರು.
ಆರಂಭದಲ್ಲಿ ಕೆಲವು ಮನೆ ಖಾಲಿಯಿದ್ದು, ಮನೆ ಇಲ್ಲದ ನಿರ್ಗತಿಕ 38 ಕುಟುಂಬಗಳು ಖಾಲಿ ಮನೆಗಳಲ್ಲಿ ವಾಸವಾಗಿದ್ದಾರೆ. ಆದರೀಗ ಅಸಲಿ ಮಾಲೀಕರು ಬಂದು ಮನೆ ಖಾಲಿ ಮಾಡಿ ಎಂದು ದಬ್ಬಾಳಿಕೆ ನಡೆಸುತ್ತಿದ್ದಾರೆ. ಪ್ರತಿದಿನ ಮನೆ ಬಳಿ ಗೂಂಡಾಗಳನ್ನು ಕರೆತಂದು ಮನೆ ಖಾಲಿ ಮಾಡಿ ಎಂದು ಮಾನಸಿಕ ಕಿರುಕುಳ ನೀಡುತ್ತಿದ್ದಾರೆಂದು ಈ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.
Kshetra Samachara
26/12/2021 09:25 am