ಬೆಂಗಳೂರು: ಅನಂತ್ ರಾಜು ಆತ್ಮಹತ್ಯೆ ಪ್ರತಿ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಸುಮಾ ವಿರುದ್ಧ ಬ್ಯಾಡರಹಳ್ಳಿ ಪೊಲೀಸರಿಗೆ ರೇಖಾ ದೂರು ನೀಡಿದ್ದರು. ಅನಂತ್ ರಾಜು ಪತ್ನಿ ಸುಮಾ ವಿರುದ್ಧ ದೂರಿನ ಬಳಿಕ ಮತ್ತೊಂದು ಆಡಿಯೋ ರಿಲೀಸ್ ಆಗಿದೆ. ಸುಮಾ ಹಾಗೂ ರೇಖಾ ಮಾತುಕತೆಯ ಆಡಿಯೋ ರಿಲೀಸ್ ಆಗಿದ್ದು ಪ್ರಕರಣದಲ್ಲಿ ಮತ್ತೊಂದು ಸ್ಫೋಟಕ ವಿಚಾರ ಬಯಲಿಗೆ ಬಂದಿದೆ. ಅನಂತ್‌ರಾಜು ಅವರಿಂದ ಗರ್ಭಿಣಿಯಾಗಿದ್ದ ರೇಖಾ ಗರ್ಭಪಾತ ಮಾಡಿಸಿಕೊಂಡಿದ್ದರು ಅನ್ನೋದು ಆಡಿಯೋದಲ್ಲಿ ಬಯಲಾಗಿದೆ. ಅನಂತ್‌ರಾಜು ಮಾತಿಗೆ ಬೆಲೆ ಕೊಟ್ಟು ಅಬಾರ್ಷನ್ ಮಾಡಿಸಿಕೊಂಡಿದ್ದನ್ನ ಸುಮಾ ಬಳಿ ರೇಖಾ ಹೇಳಿಕೊಂಡಿದ್ದಾಳೆ.
ನಾನು ಮಗುವನ್ನು ನೋಡಿಕೊಳ್ತೀನಿ ಎಂದು ಹೇಳಿದ್ದೆ. ಆದರೆ ಅನಂತ್‌ರಾಜು ಮುಂದೆ ಸಮಸ್ಯೆ ಆಗುತ್ತೆ ಬೇಡ ಅಂತಾ ಹೇಳಿದ್ರು. ಹೀಗಾಗಿ ಅವರ ಮಾತಿಗೆ ಬೆಲೆ ಕೊಟ್ಟು ಎರಡು ಬಾರಿ ಕೂಡ ಗರ್ಭಪಾತ ಮಾಡಿಸಿಕೊಂಡಿದ್ದೆ ಎಂದು ಮಾತನಾಡಿರುವ ಆಡಿಯೋ ರಿಲೀಸ್ ಆಗಿದೆ. ಹನಿಟ್ಯ್ರಾಪ್ ಮಾಡುವ ಉದ್ದೇಶ ಇದ್ದಿದ್ರೆ ಗರ್ಭಪಾತ ಮಾಡಿಸುತ್ತಿರಲಿಲ್ಲ ಎಂಬುದು ರೇಖಾ ವಾದವಾಗಿದೆ.
Kshetra Samachara
02/06/2022 01:16 pm