ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು; ಕೆ.ಎಚ್.ಬಿ ಡೈಮೆಂಡ್ ಅಪಾರ್ಟ್ ಮೆಂಟ್ ನಿವಾಸಿಗಳ ಕಥೆ - ವ್ಯಥೆ

ಬೆಂಗಳೂರು; ಇಬ್ರ ಕಿತ್ತಾಟ ಮೂರನೆಯವನಿಗೆ ಲಾಭ ಅನ್ನುವಂತಾಗಿದೆ ಕೆ ಎಚ್ ಬಿ ಡೈಮೆಂಡ್ ಅಪಾರ್ಟ್ಮೆಂಟ್ ಕಥೆ. ಈ ಅಪಾರ್ಟ್ಮೆಂಟ್ ಗಳು ನೋಡಲು ಬಹಳ ಚೆನ್ನಾಗಿದ್ದರೂ ಒಳಗೆ ಹೋಗಿ ನೋಡಿದ್ರೆ ಕಳಪೆ ಕಾಮಗಾರಿ ಕಣ್ಣಿಗೆ ರಾಚುತ್ತದೆ.

ಹೌದು 6 ವರ್ಷದ ಹಿಂದೆ ನಿರ್ಮಾಣವಾದಂತಹ ಈ ಕೆ.ಎಚ್.ಬಿ ಡೈಮೆಂಡ್ ಅಪಾರ್ಟ್ ಮೆಂಟ್ ಈಗ ವಾಸಿಸುವುದಕ್ಕೆ ಯೋಗ್ಯವಾದ ಸ್ಥಳವಾಗಿಲ್ಲ. ಈ ಫ್ಲಾಟ್ ಗಳ ಖರೀದಿ ಮಾಡಿರುವವರು ಮಾರುವುದಕ್ಕೂ ಆಗದೆ,ವಾಸಿಸುವುದಕ್ಕೂ ಆಗದೇ ಪರದಾಡುವಂತಾಗಿದೆ. ಈ ಬಗ್ಗೆ ವಸತಿ ಸಚಿವ ಸೋಮಣ್ಣ ಕೂಡ ಈ ಸಮಸ್ಯೆ ಸರಿಪಡಿಸುವುದಾಗಿ ಆಶ್ವಾಸನೆ ಕೊಟ್ಟಿದ್ದಾರೆ.

ಅದೇನೆ ಇರ್ಲಿ ನಿಜಕ್ಕೂ‌ಇದು ಬಿರುಕು‌ ಬಿಟ್ಟಿದ್ಯಾ ಎಂದು ಪಬ್ಲಿಕ್ ನೆಕ್ಸ್ಟ್ ವರದಿ ಮಾಡಲು ಹೋದಾಗ್ಲೆ ಗೊತ್ತಾಗಿದ್ದು, ಅಲ್ಲಿನ ವಾಸ್ತವ , ಏನಂದ್ರೆ ಅಲ್ಲಿನ ನಿವಾಸಿಗಳೇ ಕಿತ್ತಾಡ್ಕೊಂಡು ಸಮಸ್ಯೆ ಮೈ ಮೇಲೆ ಎಳೆದುಕೊಂಡು ಬಿಡಿಸಲಾಗದ ಕಗ್ಗಂಟಾಗಿ ಕೂತಿದೆ.

ಆಗಿದ್ದಿಷ್ಟೇ ಒಬ್ರು ಸನಾತನಾ ಧಾರ್ಮಿಕ ಸೇವಾ ಟ್ರಸ್ಟ್ ಅದ್ಯಕ್ಷ ಶ್ರೀಧರ್ ಎಂಬುವವರು ನಾನು ಗಿಡ ನೆಟ್ಟಿದ್ದೇನೆ, ನನ್ನಿಂದ ಇಲ್ಲಿ ಅಭಿವೃದ್ಧಿಯಾಗಿದೆ ಅಂದರೆ, ಡೈಮೆಂಡ್ ವೆಲ್ ಫೇರ್ ಓನರ್ ಆಸೋಯೇಶನ್ ಜಾದವ್ ಅವ್ರು ಹೇಳುವ ಪ್ರಕಾರ ಶ್ರೀದರ್ ಸರಿ ಇಲ್ಲ, ಅಕ್ರಮವಾಗಿ ಗಿಡ ನೆಟ್ಟಿದ್ದಾರೆ, ಲಂಚಕೋರ, ಅವನ ಬಗ್ಗೆ ಎಷ್ಟು ಬಾರಿ ದೂರು ನೀಡಿದ್ರು ಪೊಲೀಸ್ ಕೇಸ್ ತಗೊಳ್ತಿಲ್ಲ ಎನ್ನುತ್ತಾರೆ.

ಇತ್ತ ಕಡೆ ಬಿಲ್ಡಿಂಗ್ ಕೊಲಾಪ್ಸ್ ಆಗೋ ಮಟ್ಟಕ್ಕೆ ಇದ್ರೆ, ಇವರು ಗಿಡಗಳಿಗೆ ಕಿತ್ತಾಡುತ್ತಿದ್ದಾರೆ, ಒಟ್ನಲ್ಲಿ ಇವರಿಬ್ಬರ ಜಗಳದಲ್ಲಿ ಕಳಪೆ ಕಾಮಗಾರಿ ಮಾಡಿ ಅಪಾರ್ಟ್ ಮೆಂಟ್ ಸೇಲ್ ಮಾಡಿ ದುಡ್ಡು‌ಮಾಡಿದ ಓನರ್ ಗಳು ಲಾಭ ಪಡೆದಿದ್ದಾರೆ.

Edited By :
Kshetra Samachara

Kshetra Samachara

04/05/2022 07:22 pm

Cinque Terre

3.51 K

Cinque Terre

0

ಸಂಬಂಧಿತ ಸುದ್ದಿ