ಬೆಂಗಳೂರು: ಬೆಂಗಳೂರು ನಗರದ ಸಮೀಪವೇ ಇರುವ ಜಲಪಾತಕ್ಕೆ ಬರುವ ಯುವಕರು ಮೈಮರೆತು ಜೀವಕ್ಕೆ ಕುತ್ತು ತರುವ ಸ್ಥಳಗಳಿಗೆ ಹೋಗುತ್ತಿದ್ದಾರೆ. ಈ ಜಲಪಾತವು ಇರುವುದು ಬನ್ನೇರುಘಟ್ಟ ಅರಣ್ಯ ಪ್ರದೇಶದಲ್ಲಿ. ಕಾಡಿನ ದಟ್ಟ ನಡುವೆ ಇರುವ ತೊಟ್ಟಿಕಲ್ಲು ಜಲಪಾತಕ್ಕೆ ಬರುವ ಯುವಕರು ದಟ್ಟವಾದ ಅರಣ್ಯ ಪ್ರದೇಶದ ಒಳಗೆ ಹೋಗಿ ಮೈಮರೆತು ಅಪಾಯದ ಸ್ಥಳಗಳಲ್ಲಿಯೇ ಕುಳಿತುಕೊಂಡು ಮೋಜು-ಮಸ್ತಿ ಮಾಡುತ್ತಿದ್ದಾರೆ. ಈ ಜಲಪಾತವನ್ನು ನೋಡಲು ಬಂದ ಅನೇಕ ಯುವಕರು ಜೀವ ಕಳೆದುಕೊಂಡಿರುವ ಅನೇಕ ಬಾರಿ ನಡೆದಿವೆ ಆದರೂ ಕೂಡ ಯುವಕ-ಯುವತಿಯರು ತಮ್ಮ ಜೀವಗಳನ್ನು ಕಳೆದುಕೊಳ್ಳುವ ಅಪಾಯ ಸ್ಥಳಗಳಿಗೆ ಹೋಗುತ್ತಿದ್ದಾರೆ.
ಈ ದೃಶ್ಯ ಒಮ್ಮೆ ನೋಡಿ ಕಾಡಿನ ಮಧ್ಯದಲ್ಲಿ ಎತ್ತರವಾಗಿರುವ ಅಂತ ಬಂಡೆಕಲ್ಲಿನ ಮೇಲೆ ಯುವಕ-ಯುವತಿಯರು ಹತ್ತಿ ಬಂಡೆಕಲ್ಲಿನ ತುದಿಯಲ್ಲಿ ಕುಳಿತು ತಮ್ಮ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುತ್ತಿದ್ದಾರೆ. ಬಂಡೆಕಲ್ಲಿನ ಮೇಲೆ ಇಂದ ಕೊಂಚ ಜಾರಿ ಬಿದ್ದರೂ ಕೂಡ ಇವರ ಜೀವ ಉಳಿಯುವ ಮಾತೇ ಇಲ್ಲ. ಇನ್ನೊಂದು ದೃಶ್ಯ ಒಮ್ಮೆ ನೋಡಿ ಒಂದು ವರ್ಷಗಳ ಹಿಂದೆ ಇದೇ ಜಲಪಾತದ ಮೇಲಿಂದ ಜಾರಿ ಜಲಪಾತದ ಕೆಳಗೆ ಇರುವ ಬಂಡೆಕಲ್ಲಿನ ಮೇಲೆ ಬಿದ್ದು ಯುವಕನೋರ್ವ ತನ್ನ ಜೀವವನ್ನೇ ಕಳೆದುಕೊಂಡಿದ್ದ. ಈಗ ಅದೇ ಜಾಗದಲ್ಲಿ ಯುವಕ-ಯುವತಿಯರು ಕುಳಿತು ನೀರಿನಲ್ಲಿ ಆಟವಾಡುತ್ತಿದ್ದಾರೆ. ನೀರಿನ ರಭಸ ಏನಾದರೂ ಇವರನ್ನು ಒಮ್ಮೆ ತಳ್ಳಿದರೆ ಇವರು ಜಲಪಾತದ ಮೇಲಿಂದ ಬಿದ್ದು ಇವರ ಜೀವಗಳು ಕೂಡ ಕಳೆದುಕೊಳ್ಳುತ್ತಾರೆ.
ಇನ್ನೊಂದು ಕಡೆ ಜಲಪಾತ ನೋಡಲು ಬರುವ ಯುವಕ-ಯುವತಿಯರು ಬೆಟ್ಟ ಹತ್ತಿಕೊಂಡು ಕಾಡಿನ ಒಳಗೆ ಪ್ರವೇಶ ಮಾಡುತ್ತಿದ್ದಾರೆ. ಮೊದಲೇ ಈ ಅರಣ್ಯ ಪ್ರದೇಶದಲ್ಲಿ ಆನೆ, ಹುಲಿ, ಚಿರತೆಗಳ ಚಲನವಲನ ಹೆಚ್ಚಾಗಿರುತ್ತೆ. ಜಾಗ ಆದರೆ ಇಲ್ಲಿ ಯುವಕ-ಯುವತಿಯರು ಮೈಮರೆತು ಕಾಡಿನ ಒಳಗೆ ಹೋಗಿ ಮೋಜು-ಮಸ್ತಿ ಮಾಡುತ್ತಿದ್ದಾರೆ. ದಟ್ಟವಾದ ಕಾಡಿನ ಒಳಗಿರುವ ನದಿಯಲ್ಲಿ ಯುವಕ-ಯುವತಿಯರು ಮೈಮರೆತು ಹೋಗಿದ್ದಾರೆ. ಕಾಡಿನ ಒಳಗಿರುವ ಈ ನದಿಗೆ ಆನೆಗಳು ಅಥವಾ ಕಾಡು ಪ್ರಾಣಿಗಳು ನೀರು ಕುಡಿಯಲು ಬಂದರೆ ಇವರ ಸ್ಥಿತಿ ಏನಾಗಬಹುದು ಎಂದು ಒಮ್ಮೆ ಯೋಚಿಸಿ. ಕೂಡಲೇ ಅರಣ್ಯ ಅಧಿಕಾರಿಗಳು ಎಚ್ಚೆತ್ತುಕೊಂಡು ಅರಣ್ಯದೊಳಗೆ ಪ್ರವೇಶ ಮಾಡುತ್ತಿರುವ ಯುವಕರಿಗೆ ಬ್ರೇಕ್ ಹಾಕಬೇಕು ಇಲ್ಲವಾದರೆ ಮುಂದೊಂದು ದಿನ ಅನಾಹುತ ಆಗುವುದು ಖಂಡಿತ.
ನವೀನ್, ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
22/06/2022 07:54 pm