ಬೆಂಗಳೂರು: ಇಂದು ನಗರಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕನಕಪುರ ರಸ್ತೆಯಲ್ಲಿರುವ ಇಸ್ಕಾನ್ ಟೆಂಪಲ್ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪರಿಸರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಕನಕಪುರ ರಸ್ತೆಯಲ್ಲಿನ ಅಂಗಡಿ- ಹೋಟೆಲ್, ಕಚೇರಿ ಮತ್ತು ಎಲ್ಲ ವಾಣಿಜ್ಯ ಮಳಿಗೆಗಳನ್ನು ಮುಚ್ಚಲಾಗಿದೆ. ಮಧ್ಯಾಹ್ನ 1 ಗಂಟೆಯವರೆಗೂ ಎಲ್ಲ ಅಂಗಡಿ-ಮುಂಗಟ್ಟುಗಳು ಹೀಗೆ ಬಂದ್ ಇರಲಿದೆ.
ರಾಷ್ಟ್ರಪತಿಗಳು ಹೋಗುವಾಗ ವಾಹನ ಸಂಚಾರವನ್ನು ಕಂಪ್ಲೀಟ್ ಆಗಿ ಬಂದ್ ಮಾಡಲಾಗುವುದು. ಸಂಪೂರ್ಣ ಕನಕಪುರ ರಸ್ತೆ ಪೊಲೀಸರ ಕಣ್ಗಾವಲಿನಲ್ಲಿ ಇದೆ. ಪ್ರತಿ 10 ಮೀಟರ್ ಗಳಿಗೆ 3 ಮಂದಿ ಪೊಲೀಸ್ ಸಿಬ್ಬಂದಿ ಕರ್ತವ್ಯದಲ್ಲಿದ್ದಾರೆ.
Kshetra Samachara
14/06/2022 01:18 pm